ಬಸವಕಲ್ಯಾಣ: ಬಸವ ಧರ್ಮ ಪೀಠದಿಂದ ಉಚ್ಚಾಟನೆಗೊಂಡಿರುವ ಶ್ರೀ ಚನ್ನಬಸವಾನಂದ ಸ್ವಾಮೀಜಿ ಸೇರಿ ನಾಲ್ವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಬಸವದಳ ರಾಜ್ಯ ಸಂಘಟನಾ ಕಾರ್ಯದಶರ್ಿ ರವೀಂದ್ರ ಪಾಪಡೆ ದೂರು ನೀಡಿದ್ದಾರೆ. ಚನ್ನಬಸವಾನಂದ ಶ್ರೀ, ಶಿವರಾಜ ಪಾಟೀಲ್ ಅತಿವಾಳ, ರವಿಕಾಂತ ಬಿರಾದಾರ್ ಹಾಗೂ ಬಸವಂತರಾವ ಬಿರಾದಾರ್ ಅವರು ಬಸವ ಮಹಾಮನೆಗೆ ನಿರಂತರ ಬರುತ್ತಿದ್ದರು. ಆ.20ರಂದು ದಾಖಲಾತಿಗಳ ಕೋಣೆಗೆ ಆಗಮಿಸಿ ಹೊರಬರುತ್ತಿದ್ದಾಗ ಪಾಪಡೆ ಅವರು, ಬಸವಧರ್ಮ ಪೀಠದಿಂದ ನಿಮ್ಮನ್ನು ಉಚ್ಚಾಟಿಸಲಾಗಿದೆ. ಹೀಗಿರುವ ಮತ್ತೇಕೆ ಇಲ್ಲಿಗೆ ಬಂದಿದ್ದೀರಿ ಎಂದು ಚನ್ನಬಸವಾನಂದ ಶ್ರೀಗಳನ್ನು ಪ್ರಶ್ನಿಸಿದ್ದಾರೆ. ಈ ವೇಳೆ ತಮ್ಮ ಮೇಲೆ ಶಿವರಾಜ ಪಾಟೀಲ್ ಹಲ್ಲೆ ಮಾಡಲು ಮುಂದಾಗಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪಾಪಡೆ ದೂರಿನಲ್ಲಿ ತಿಳಿಸಿದ್ದಾರೆ.