ಜಿಲ್ಲೆ

ಚನ್ನಕೇಶವ ಸ್ವಾಮಿ ದೇಗುಲದಲ್ಲಿದ್ದ ಹುಂಡಿ ಏಣಿಕೆ

ಬೇಲೂರು; ಬೇಲೂರಿನ ಶ್ರೀಚನ್ನಕೇಶವ ಸ್ವಾಮಿ ದೇಗುಲದಲ್ಲಿದ್ದ 11 ಹುಂಡಿಗಳನ್ನು ಸಿಸಿ ಕ್ಯಾಮೆರಗಳ ಕಣ್ಗಾವಲಿನಲ್ಲಿ ಶನಿವಾರ ಪಟ್ಟಣದ ಶಾಂತಳಾ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್ ಸಿಬ್ಬಂದಿ ಹಾಗೂ ದೇಗುಲ ವ್ಯವಸ್ಥಾಪನ ಸದಸ್ಯರ ಸಮ್ಮುಖದಲ್ಲಿ ತೆರೆಯಲಾಯಿತು.


ಶ್ರೀಚನ್ನಕೇಶವ ಸ್ವಾಮಿ ದೇಗುಲದಲ್ಲಿ ಒಟ್ಟು 11 ಹುಂಡಿಗಳಿದ್ದು ಕಳೆದ ವರ್ಷ ದಿನಾಂಕ 4-11-2022 ರಲ್ಲಿ 5 ತಿಂಗಳ ಅವಧಿಯಲ್ಲಿ 35 ಲಕ್ಷದ 21 ಸಾವಿರದ 878 ರೂ, ಆಧಾಯ ಬಂದಿತ್ತು. ಆದರೆ ಎರಡು ತಿಂಳು ಕಳೆದ ನಂತರ ಪುನ: ದಿನಾಂಕ:6-1-2023 ರಂದು ಮತ್ತೆ ಹುಂಡಿಗಳನ್ನು ತೆರದು ಏಣಿಕೆ ಮಾಡಿದ ಸಂದರ್ಭ 19 ಲಕ್ಷದ 45 ಸಾವಿರದ 740 ರೂ, ಆಧಾಯ ಬಂದಿದೆ. ವಿಶೇಷವೆಂದರೆ ಕಳೆದ ಎರಡು ತಿಂಗಳಲ್ಲಿ ಬೇಲೂರು ದೇಗುಲಕ್ಕೆ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತರು ಆಗಮಿಸಿದ್ದರಿಂದ ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಲು ಕಾರಣವಾಗಿದೆ.


ಶ್ರೀಚನ್ನಕೆಶವಸ್ವಾಮಿ ಏಗುಲ ಇಒ ವಿದ್ಯುಲತಾ ಮಾತನಾಡಿ, ಈ ಬಾರಿ ದೇಗುಲದ ಹುಂಡಿಯಲ್ಲಿ ಸಿಕ್ಕಿರುವ ಹಣದಲ್ಲಿ ದೇವಾಲಯದ ಅಭಿವೃದ್ಧಿ ಹಾಗೂ ಸಿಬ್ಬಂದಿಯ ವೇತನಕ್ಕೆ ಬಳಸಲಾಗುವುದು. ಹಣ ಎಣಿಕೆಯಲ್ಲಿ ಭಾಗವಹಿಸಿದ್ದ ಶಾಂತಳಾ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕಿನ ಸಿಬ್ಬಂದಿ ಮತ್ತು ನಮ್ಮ ವ್ಯವಸ್ಥಾಮನಾ ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.


ಎಣಿಕೆ ಕಾರ್ಯದ ಸಂದರ್ಭ ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ಟರ್, ನರಸಿಂಹ ಪ್ರಿಯ ಭಟ್, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಸದಸ್ಯರಾದ ರವಿಶಂಕರ್, ಪ್ರಮೋದ್, ಮೋಹನ್, ವಿಜಯಲಕ್ಷ್ಮಿ, ಸುಧಾ, ರಮೇಶ್, ಶಾಂತಳಾ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ದೇಗುಲದ ಸಿಬ್ಬಂದಿ ಇದ್ದರು.