ಚೆನ್ನಯ್ಯನ ಕೋಟೆ ಗ್ರಾಮಲ್ಲಿ ಮನೆ ಕುಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. 
ಜಿಲ್ಲೆ

ಚೆನ್ನಯ್ಯನ ಕೋಟೆಯಲ್ಲಿ ಮನೆ ಕುಸಿತ

ಸಿದ್ದಾಪುರ: ಧಾರಾಕಾರ ಮಳೆಗೆ ಸೋಮವಾರ ಮುಂಜಾನೆ ಚೆನ್ನಯ್ಯನ ಕೋಟೆ ಗ್ರಾಮಲ್ಲಿ ಮನೆ ಕುಸಿದಿದೆ.


ಕೂಲಿ ಕಾರ್ಮಿಕ ಎಚ್.ಕೆ.ಉದಯ ಅವರ ಮನೆ ಕುಸಿದಿದ್ದು, ಸೂರು ಕಳೆದುಕೊಂಡಿದ್ದಾರೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸೋಮವಾರ ಮುಂಜಾನೆ ಚೆನ್ನಯ್ಯನ ಕೋಟೆಯಲ್ಲಿ ಎಚ್.ಕೆ.ಉದಯ ಅವರ ಮನೆಯ ಎರಡು ಗೋಡೆ ಸಂಪೂರ್ಣ ಕುಸಿದುಬಿದ್ದಿದೆೆ. ಮನೆಯಲ್ಲಿದ್ದವರು ತಕ್ಷಣ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಗ್ರಾಮಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.