ಜಿಲ್ಲೆ

ಚಕ್ಕಡಿಯಿಂದ ತಕ್ಕಡಿ ಸ್ಥಾನಕ್ಕೇರಿದ ನ್ಯಾ.ಶಿವರಾಜ ಪಾಟೀಲ್

ಕಲಬುರಗಿ: ಹಳ್ಳಿಯಲ್ಲಿ ಜನಿಸಿ ಚಕ್ಕಡಿಯಲ್ಲಿ ಸಂಚರಿಸಿ, ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿ ಸರ್ವೋಚ್ಛ ನ್ಯಾಯಾಲಯದಲ್ಲಿನ ತಕ್ಕಡಿಯ ಸ್ಥಾನದವರೆಗೆ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್ ಏರಿದ ಜೀವನಗಾಥೆ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಬಣ್ಣಿಸಿದರು.
ನಗರದ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ನ್ಯಾಯಮೂರ್ತಿಡಾ.ಶಿವರಾಜ ವಿ.ಪಾಟೀಲ್ ಪ್ರತಿಷ್ಠಾನದಿಂದ ಭಾನುವಾರ ಏರ್ಪಡಿಸಿದ್ದ ವಿಶ್ರಾಂತ ನ್ಯಾಯಮೂರ್ತಿ ಡಾ.ಶಿವರಾಜ ವಿ.ಪಾಟೀಲ್‌ರ ಆತ್ಮಕಥನ `ಕಳೆದ ಕಾಲ ನಡೆದ ದೂರ' ಎರಡನೇ ಮುದ್ರಣ ಲೋಕಾರ್ಪಣೆ ಮಾತನಾಡಿ ಮಾತನಾಡಿದರು.
ನ್ಯಾಯವಾದಿಯಿಂದ ವೃತ್ತಿ ಜೀವನ ಆರಂಭಿಸಿದ ನ್ಯಾ.ಶಿವರಾಜ ಪಾಟೀಲ್‌ರು, ಹೈಕೋರ್ಟ್ ವಕೀಲರಾಗಿ, ಮದ್ರಾಸ್, ರಾಜಸ್ಥಾನ, ಕರ್ನಾಟಕ ಲೋಕಾಯುಕ್ತರಾಗಿದ್ದರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಹಂತ ಹಂತವಾಗಿ ಬೆಳೆದು, ನ್ಯಾಯಾಂಗ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಸರಳ ಸಜ್ಜನಿಕೆಯಿಂದ ವಿಶ್ವಪ್ರೀಯರಾಗಿz್ದÁರೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ನ್ಯಾಯಾಂಗ ಕ್ಷೇತ್ರದಲ್ಲಿ ಅಗಾಧ ಪ್ರಮಾಣದ ಕೊಡುಗೆ ನೀಡಿ, ನೊಂದವರ ಬಾಳಿಗೆ ಬೆಳಕಾಗಿದ್ದಾರೆ ಎಂದರು.
ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ನಾಡೋಜ ಶ್ರೀ ಡಾ.ಬವಸಲಿಂಗ ಪಟ್ಟz್ದೆÃವರು, ಇಳಕಲ್‌ದ ಶ್ರೀ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್ ವಿ.ಪಾಟೀಲï ಅಧ್ಯP್ಷÀತೆ ವಹಿಸಿ ಮಾತನಾಡಿದರು.
ಪ್ರತಿಷ್ಠಾನ ಅಧ್ಯP್ಷÀ ಎಸ್.ಎನ್.ರೆಡ್ಡಿ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ.ಚನ್ನಾರೆಡ್ಡಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಜಿ¯್ಲÁ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ನಾಗಶ್ರೀ, ದಯಾನಂದ, ಮೋಹನï, ಹೇಮಾವತಿ, ಪ್ರಮುಖರಾದ ಚಂದ್ರಶೇಖರ, ಯಮನಪ್ಪ, ಡಾ.ವಿಶ್ವನಾಥ ರೆಡ್ಡಿ, ಬಸವರಾಜ ಪಾಟೀಲ್ ಸೇಡಂ, ಡಾ.ಎಚ್.ವೀರಭದ್ರಪ್ಪ, ಡಾ.ವಿಕ್ರಂ ಸಿz್ದÁರಡ್ಡಿ, ಅಭಿಷೇಕ ಚನ್ನಾರಡ್ಡಿ ಪಾಟೀಲ್, ಗೀತಾ ಚನ್ನಾರಡ್ಡಿ ಪಾಟೀಲ್, ಎಂ.ಸಿ.ಕಿರದಳ್ಳಿ, ಕಲ್ಯಾಣರಾವ ಪಾಟೀಲ್, ಕರುಣೇಶ ಹಿರೇಮಠ, ಪ್ರಶಾಂತ ಕುಲಕರ್ಣಿ, ಗುರುರಾಜ ಕುಲಕರ್ಣಿ, ವಿಜಯಕುಮಾರ ಚೇಂಗಟಾ, ಡಾ.ಶರಣಬಸಪ್ಪ ವಡ್ಡನಕೇರಿ ಇತರರಿದ್ದರು. ವಿದ್ಯಾವತಿ ಪಾಟೀಲï ನಿರೂಪಣೆ ಮಾಡಿದರು.