ಜಿಲ್ಲೆ

ಚಂದ್ರಯಾನ ಯಶಸ್ಸಿಗೆ ಪ್ರಾರ್ಥನೆ

ಕೊಪ್ಪಳ: ಇಸ್ರೋ ಕೈಗೊಂಡಿರುವ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ನಗರದ ಶಿವಮೂರ್ತಯ್ಯ ಮಹಾಂತಯ್ಯನಮಠ ಶಾಲೆ ವಿದ್ಯಾರ್ಥಿಗಳು ಬುಧವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ಸಂಸ್ಥೆಯ ಅಧ್ಯಕ್ಷ ವಿರೇಶ ಮಹಾಂಯ್ಯನಮಠ ಮಾತನಾಡಿ, ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಇಸ್ರೋ ಪ್ರತಿಭಾವಂತ ವಿಜ್ಞಾನಿಗಳು ಕೈಗೊಂಡ ಚಂದ್ರಯಾನ-3 ಯಶಸ್ವಿಯಾಗಲಿದೆ. ಈ ಮೂಲಕ ಭಾರತ ವಿಶ್ವದಲ್ಲಿ ಮಹತ್ವದ ಸ್ಥಾನ ಗಳಿಸಲಿದೆ ಎಂದರು.


ಸಮಾಜ ಸೇವಕ ದೊಡ್ಡನಗೌಡ ಓಜಿನಹಳ್ಳಿ ಮಾತನಾಡಿ, ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿರುವ ಚಂದ್ರಯಾನ-3 ವಿಕ್ರಮ್ ನೌಕೆಯು ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಲಿದೆ ಎಂದರು.


ಶಾಲೆಯ ವಿದ್ಯಾರ್ಥಿಗಳು ಚಂದ್ರಯಾನ-3 ಯಶಸ್ವಿಯಾಗಲಿ, ಬೋಲೋ ಭಾರತ ಮಾತಾ ಕೀ ಜೈ, ಜೈ ಜವಾನ್ ಜೈ ಕಿಸಾನ್ ಘೋಷಣೆ ಹಾಕಿ ಪ್ರಾರ್ಥನೆ ಮಾಡಿದರು.
ಪೂರ್ಣಿಮ ದೊಡ್ಡನಗೌಡ ಓಜಿನಹಳ್ಳಿ, ಸಂಕೇತಗೌಡ ಓಜಿನಹಳ್ಳಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು. ಸಂಸ್ಥೆಯ ಭಾರತಿ ಎಂ.ಎಸ್.ಮಹಾಂತಯ್ಯನಮಠ, ಶಾಲೆಯ ಮುಖ್ಯ ಶಿಕ್ಷಕ ಮಹೇಶ ಕೆ.ಎಂ., ಪವಿತ್ರ ಮಡಿವಾಳರ, ರೇಣುಕಾ ಹೂಗಾರ, ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಇದ್ದರು.