ಜಿಲ್ಲೆ

ಚಂದ್ರಯಾನ ಯಶಸ್ವಿ : ಇಸ್ರೋ ವಿಜ್ಞಾನಿಗಳ ಕಾರ್ಯಕ್ಕೆ ನರಸಿಂಹ ಮೆಂಡನ್ ಶ್ಲಾಘನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಚಂದ್ರನ ಅಂಗಳದಲ್ಲಿ ಏನಿದೆ ಎಂಬುದರ ಅನ್ವೇಷಣೆ ಮಾಡಲು ಭಾರತದ ವಿಜ್ಞಾನಿಗಳ ನಿರಂತರ ಪ್ರಯತ್ನದ ಫಲವಾಗಿ ಈಗ ಚಂದ್ರಯಾನ-೩ ಯಶಸ್ವಿಯಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಸದಸ್ಯರಾದ ನರಸಿಂಹ ಮೆಂಡನ್ ಹರ್ಷ ವ್ಯಕ್ತಪಡಿಸಿದ್ದಾರೆ.

. ಚಂದ್ರನ ಕಕ್ಷೆಯಲ್ಲಿ ವಿಕ್ರಮ್ ಸುರಕ್ಷಿತವಾಗಿ ಇಳಿದಿದ್ದು ಸುವರ್ಣ ಅಕ್ಷರಗಳಲ್ಲಿ ಬರೆದಿರುವಂತಿದೆ. ಇದು ದೇಶದ ಹೆಮ್ಮೆಯ ಸಂಗತಿಯಾಗಿದೆ. ವಿಶ್ವದಲ್ಲಿಯೇ ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪ್ರತಿಮವಾಗಿದೆ ಎಂಬುದು ಇದರಿಂದ ಸಾಬೀತಾಗಿದೆ. ಎಂದು ತಿಳಿಸಿದ್ದಾರೆ.
|