ಜಿಲ್ಲೆ

ಚಂದ್ರನ ಚುಂಬಿಸಿದ ಭಾರತ ತೊಗರಿ ನಾಡಿನ ಎಲ್ಲಡೆ ಸಂಭ್ರಮಾಚರಣೆ : ಜೈ ಇಸ್ರೋ ಎಂದ ಜನರು


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಚಂದ್ರಯಾನ-೩ ನೌಕೆಯು ಚಂದ್ರನ ದಕ್ಷಿಣ ಕಕ್ಷೆಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದರ ಬೆನ್ನಲ್ಲಿಯೇ ತೊಗರಿ ನಾಡು ಕಲಬುರಗಿ ಸೇರಿದಂತೆ ಜಿಲ್ಲೆಯ ಎಲ್ಲಡೆ ಸಂಭ್ರಮ ಎಲ್ಲೆ ಮೀರಿತ್ತು. ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ,ಅನೇಕರು ಸಿಹಿ ಹಂಚಿ ಖುಷಿಪಟ್ಟರು. ವಿಕ್ರಂ ಲ್ಯಾಂಡಿAಗ್ ಯಶಸ್ವಿಯಾಗಲಿ ಎಂದು ಬೆಳಗ್ಗೆಯಿಂದಲೂ ಅನೇಕ ಕಡೆಗಳಲ್ಲಿ ದೇವರ ಮೊರೆ ಹೋಗಿದ್ದವರ ಖುಷಿಗೆ ಪಾರವೇ ಇರಲಿಲ್ಲ.
ವಿಕ್ರಂ ನೌಕೆ ಚಂದ್ರನ ಚುಂಬಿಸುತ್ತಿದ್ದAತೆ ಎಲ್ಲಡೆ ಹರ್ಷೋದ್ಘಾರ ಮೊಳಗಿತು. ನಗರದ ಜಿಲ್ಲಾ ವಿಜ್ಞಾನ ಕೇಂದ್ರ, ಶರಣಬಸವ ವಿಶ್ವವಿದ್ಯಾಲಯ, ವಿ.ಜಿ.ಮಹಿಳಾ ಮಹಾವಿದ್ಯಾಲಯ, ಗುವಿವಿಯಲ್ಲಿ ಹೀಗೆ ಅನೇಕ ಕಡೆಗಳಲ್ಲಿ ಲ್ಯಾಂಡಿAಗ್ ನೇರ ಪ್ರಸಾರ ನೋಡಿಕೊಂಡು ಕುಳಿತುಕೊಂಡಿದ್ದ ವಿದ್ಯಾರ್ಥಿಗಳು ಯಶಸ್ವಿಯಾಗಿ ಲ್ಯಾಂಡಿAಗ್ ಆಗಿದೆ ಎಂಬ ಸಂದೇಶ ಹೊರ ಬೀಳುತ್ತಲೇ ಕುಣಿದು ಕುಪ್ಪಳಿಸಿದರು.  ಎದ್ದು ನಿಂತುಕೊAಡು ಚಪ್ಪಾಳೆ ತಟ್ಟಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು. ಗ್ರೇಟ್ ಇಂಡಿಯ ಎಂದು ಘೋಷಣೆ ಹಾಕಿದರು.
ನಗರದ ಆನಂದ ವೃತ್ತದಲ್ಲಿ ಡಾ.ರಾಜು ಕುಳಗೇರಿ ನೇತೃತ್ವದಲ್ಲಿ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಖಂಡರಾದ ಆನಂದ ನಂದೂರಕರ್, ಸುರೇಶ ಪಾಟೀಲ್ ಜೋಗೂರ,ದವಲತ್ತರಾಯಗೌಡ ಪಾಟೀಲ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಹಲವಾರು ಸಂಘಟನೆಗಳ ಪದಾಧಿಕಾರಿಗಳು ಜಮಾಗೊಂಡು  ಪಟಾಕಿಸಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಅಲ್ಲದೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ, ಪಟ್ಟಣ, ಹಳ್ಳಿಗಳಲ್ಲಿ ಯುವ ಜನರು ಸಂಭ್ರಮಿಸಿದರು.
ಅಪ್ಪನ ಗುಡಿಯಲ್ಲಿ ವಿಶೇಷ ಪೂಜೆ
ನಾಡಿನ ಆರಾಧ್ಯ ದೈವವಾಗಿರುವ ನಗರದ ಮಹಾದಾಸೋಹಿ ಶರಣಬಸವೇಶ್ವರರ ದೇವಾಲಯದಲ್ಲಿ  ಚಂದ್ರಯಾನ-೩  ವಿಕ್ರಂ ಲ್ಯಾಡರ್ ಚಂದ್ರನ ಅಂಗಳದಲ್ಲಿ  ಸುರಕ್ಷಿತ ಮತ್ತು ಮೃದುವಾಗಿ ಚಂದ್ರನ ಕಕ್ಷೆಗೆ ಇಳಿಯಲಿ ಎಂದು ಶರಣರ ಸನ್ನಿಧಿಗೆ ವಿಶೇಷ ಪೂಜೆಯನ್ನು  ಶರಣಬಸವೇಶ್ವರ ಸಂಸ್ಥಾನ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಹಾಗೂ ೯ ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ನೇತೃತ್ವದಲ್ಲಿ ಜರುಗಿತು.ಮಾತೋಶ್ರೀ ದಾಕ್ಷಾಯಿಣಿ ಅಪ್ಪ,  ಶರಣಬಸವ ವಿಶ್ವವಿದ್ಯಾಲಯ ಕುಲಪತಿ ಡಾ.ನಿರಂಜನ್ ನಿಷ್ಠಿ, ಕುಲಸಚಿವ ಅನಿಕುಮಾರ ಬಿಡವೆ, ಪ್ರಮುಖರಾದ ಶರಣು ಪಪ್ಪಾ, ಬಸವರಾಜ ದೇಶಮುಖ, ಮಾಲಾ ದಣ್ಣೂರ, ಲಕ್ಷಿö್ಮÃ ಪಾಟೀಲ್ ಮಾಕಾ ಇತರರಿದ್ದರು.