ಜಿಲ್ಲೆ

ಚಂದನಕೇರಾ ಗ್ರಾಪಂನಲ್ಲಿ ಭ್ರಷ್ಟಾಚಾರ; ತನಿಖೆಗೆ ಆಗ್ರಹ

ಚಿಂಚೋಳಿ: ಚಂದನಕೇರಾ ಗ್ರಾಮ ಪಂಚಾಯಿತಿಯಲ್ಲಿ ಜೆಜೆಎಂ ಕಳಪೆ ಕಾಮಗಾರಿ, ವಸತಿ ಯೋಜನೆ ಹಾಗೂ ೧೫ನೇ ಹಣಕಾಸು ಯೋಜನೆಯಲ್ಲಿ ನಡೆದ ಭ್ರಷ್ಟಾಚಾರಗಳ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಹಿಂದುಳಿದ ಜಾತಿ ವರ್ಗಗಗಳ ಒಕ್ಕೂಟದಿಂದ ಶನಿವಾರ ಚಂದನಕೇರಾದಲ್ಲಿನ ಕಮಲಾಪುರ- ಚಿಂಚೋಳಿ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.

ಮುಖಂಡ ಹಣಮಂತ ಪೂಜಾರಿ ಮಾತನಾಡಿ, ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ವಸತಿ ಯೋಜನೆಯಡಿ ನಿಜವಾದ ಫಲಾನುಭವಿಗಳಿಗೆ ನಿವೇಶನ ಸಿಕ್ಕಿಲ್ಲ. ಆದರ್ಶ ಗ್ರಾಮದಲ್ಲಿ ಅವ್ಯವಹಾರ, ೧೫ನೇ ಹಣಕಾಸು ಯೋಜನೆಯ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿದರು.
ತಾಪಂ ನರೇಗಾ ಸಹಾಯಕ ನಿರ್ದೇಶಕ ಶಿವಶಂಕ್ರಯ್ಯ ಸ್ವಾಮಿ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಅಭಿಯಂತರ ರಾಹುಲ್ ಕಾಂಬ್ಳೆ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ರೈತ ಮುಖಂಡ ಶರಣಬಸಪ್ಪ ಮಮ್ಮಶೇಟ್ಟಿ, ತುಕರಾಮ ಬಸಂತಪೂರ, ರೇವಣಸಿದ್ದ ಚಂದನ್, ಜಗದೇವಿ ಕೇರಳ್ಳಿ, ಪುಂಡಲೀಕ ಬಸಂತಪೂರ, ಗೋಪಾಲ ಮ್ಯಾಕೇರಿ, ಕಾಶಿನಾಥ ಮೇಲಕೇರಿ, ಮಹ್ಮದ ಮಸ್ತಾನ್, ಅಂಬಿಕಾ ಹುಳಗೇರಿ, ಶಿವಕುಮಾರ ಬಸಂತಪೂರ, ಸುಧಾಕಾರ ಕಠಾರಿ ಸೇರಿದಂತೆ ಅನೇಕರು ಇದ್ದರು.