ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಹುನಗುಂದ ತಾಲೂಕಿನ ಗುಡೂರಿನ ಸಂತ್ರಸ್ತೆ ನೇತ್ರಾ ಕೋನಪ್ಪ ವಡ್ಡರ ಮಾತನಾಡಿದರು. ಅಶೋಕ ಲಿಂಬಾವಳಿ, ಕುಮಾರಸ್ವಾಮಿ ಹಿರೇಮಠ, ನಾಗೇಶ ಅಂಬಿಗೇರ ಇದ್ದರು. 
ಜಿಲ್ಲೆ

ಘೋರ ಅನ್ಯಾಯಕ್ಕೆ ಜೀವನ ನಡೆಸುವುದೇ ಕಷ್ಟಕರ

ಬಾಗಲಕೋಟೆ: ಮದುವೆಯಾಗು ಅಂತ ಪೀಡಿಸುತ್ತಿದ್ದಾಗ ನಾನು ನಿರಾಕರಿಸಿದ್ದಕ್ಕೆ ಮುಸ್ಲಿಂ ಸಮುದಾಯದ ವಿಕೃತ ಮನಸ್ಸಿನ ಯುವಕ ನನ್ನ ಮೇಲೆ ಪೆಟ್ರೋಲ್ ಸುರಿದು ಭಾರಿ ಪ್ರಮಾಣದಲ್ಲಿ ಗಾಯಗೊಂಡಿದ್ದೇನೆ, ಜೀವನ ನಡೆಸಲು ಸಂಕಷ್ಟ ಎದುರಾಗಿದೆ. ಯಾತನೆಯಲ್ಲಿ ಬದುಕು ಸಾಗಿಸುವಂತಾಗಿದೆ. ನಾನು ಏನೂ ತಪ್ಪು ಮಾಡಿರಲಿಲ್ಲ. ಘೋರ ಅನ್ಯಾಯವಾಗಿದ್ದು, ಸರ್ಕಾರ ಆರ್ಥಿಕ ಪರಿಹಾರ ನೀಡಬೇಕು ಎಂದು ಜಿಲ್ಲೆಯ ಹನಗುಂದ ತಾಲೂಕಿನ ಗುಡೂರಿನ ಸಂತ್ರಸ್ತೆ ನೇತ್ರಾ ಕೋನಪ್ಪ ವಡ್ಡರ(ಸಂತ್ರಸ್ತೆ) ಸರ್ಕಾರಕ್ಕೆ ಮನವಿ ಮಾಡಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಡೂರ ಗ್ರಾಮದ ಅಪ್ಜಲ್ ತಂದೆ ದಾದಾಪೀರ ಸೋಲಾಪುರ ೨೦೨೩ ಮಾರ್ಚ್ ೨೭ರಂದು ನನ್ನನ್ನು ಜೀವಂತ ಸುಡಲು ಪ್ಲಾನ್ ಮಾಡಿ ನಡು ರಸ್ತೆಯಲ್ಲಿ ಹೋಗುವಾಗ ಪೆಟ್ರೋಲ್ ಸುರಿದು ಬೆಂಕಿ ಹಂಚಿದ್ದಾನೆ. ಅದೃಷ್ಟವಾಶತ್ ಜೀವ ಉಳಿದಿದ್ದು ಕೆಲವು ತಿಂಗಳು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರವೂ ಶೇ.೭೭ರಷ್ಟು ಅಂಗವಿಕಲವಾಗಿದ್ದೇನೆ. ಸುಟ್ಟ ಗಾಯಗಳಿಗೆ ಈಗಲೂ ಚಿಕಿತ್ಸೆ ಪಡೆಯಬೇಕಾಗಿದೆ. ಸಾಕಷ್ಟು ಹಣ ಖರ್ಚು ಆಗುತ್ತಿದೆ. ನಾನು ಬಡವಳಾಗಿದ್ದು, ನನಗೆ ಈಗ ಆರ್ಥಿಕ ವ್ಯವಸ್ಥೆ ಮಾಡಲು ಕಷ್ಟವಾಗುತ್ತಿದೆ ಎಂದು ನೋವು ತೊಂಡಿಕೊ0ಡರು.

ಹಿಂದೂ ಜಾಗರಣ ವೇದಿಕೆ ಮುಖಂಡ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ನೇತ್ರಾ ವಡ್ಡರ ಸುಟ್ಟ ಗಾಯಗೊಂದಿ ಜೀವನ ತೊಂದರೆ ಅನುಭವಿಸುತ್ತಿದ್ದು, ಅವರ ಚಿಕಿತ್ಸೆಗೆ ಸಂಘ ಪರಿವಾರದವರು, ಸಮಾಜದವರು ಸಂಗ್ರಹ ಮಾಡಿಕೊಟ್ಟ ದುಡ್ಡಿನಲ್ಲಿ ಈಗ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೂ ಕೂಡ ಇನ್ನೂ ಚಿಕಿತ್ಸೆ ಪಡೆದುಕೊಳ್ಳಲು ಹೆಚ್ಚಿನ ಆರ್ಥಿಕ ನೆರವು ಬೇಕಾಗಿದ್ದು, ಸರ್ಕಾರ ಸಹಾಯ ಮಾಡಿ ಅವರಿಗೆ ಒಂದು ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ಅಶೋಕ ಲಿಂಬಾವಳಿ ಮಾತನಾಡಿ, ವಿಕೃತ ಪಟ್ಟಭದ್ರ ಹಿತಾಸಕ್ತಿಗಳು ಲವ್ ಜಿಹಾದ್ ಹೆಸರಿನಲ್ಲಿ ಹೆಣ್ಣುಮಕ್ಕಳ ಜೀವ ಹಿಂಡುತ್ತಿದ್ದಾರೆ. ಪೊಲೀಸ್ ಇಲಾಖೆ ಇಂತಹವರಿಗೆ ಕಠಿಣ ಶಿಕ್ಷೆ ವಿಽಸಬೇಕು. ಲವ್ ಜಿಹಾದ್‌ಗೆ ಪ್ರಚೋದನೆ ನೀಡುವ ಕೆಲವು ಧರ್ಮಗುರುಗಳ ಮೇಲೆಯೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಪೂರ್ಣ ಗಾಯಗೊಂಡಿರುವ ನೇತ್ರಾ ಜೀವನ ನಡೆಸುವುದು ಕಷ್ಟಮಯವಾಗಿದೆ. ಸರ್ಕಾರ ಈ ಯುವತಿಗೆ ನೆರವು ನೀಡಬೇಕು. ಆರೋಗ್ಯವಂತಳಾದ ಬಳಿಕ ಗುತ್ತಿಗೆ ಆಧಾರದ ಮೇಲೆಯಾದರೂ ಒಂದು ಉದ್ಯೋಗ ನೀಡಿದರೆ ಜೀವನಕ್ಕೆ ಆಧಾರವಾಗುತ್ತದೆ ಎಂದು ಮನವಿ ಮಾಡಿದರು.

ಮುಖಂಡರಾದ ನಾಗೇಶ ಅಂಬಿಗೇರ ಇದ್ದರು.