ಜಿಲ್ಲೆ

ಘನತ್ಯಾಜ್ಯ ವಿಲೇವಾರಿ ಘಟಕ ಪೂರ್ಣಗೊಳಿಸಿ

ಬಸವಕಲ್ಯಾಣ: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಜಿಪಂ ಸಹಾಯಕ ಕಾರ್ಯದಶರ್ಿ(ಅಭಿವೃದ್ಧಿ) ಬಾಲಾಜಿ ಕೋಟೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಸಸ್ತಾಪುರ ಗ್ರಾಮದಲ್ಲಿ ನಿಮರ್ಾಣಗೊಳ್ಳುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಘಟಕದ ಬಾಕಿ ಉಳಿದ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.

ಚಂಡಕಾಪುರ ಗ್ರಾಮದಲ್ಲಿ ಅಮೃತ ಸರೋವರ ಯೋಜನೆಯಡಿ ನಿಮರ್ಾಣಗೊಳ್ಳುತ್ತಿರುವ ನೂತನ ಕೆರೆ ಹಾಗೂ ನೂತನ ಗ್ರಾಪಂ ಕಟ್ಟಡವನ್ನು ಪರಿಶೀಲಿಸಿದರು. ಎರಂಡಗಿ ಗ್ರಾಪಂಗೆ ಭೇಟಿ ನೀಡಿ 15ನೇ ಹಣಕಾಸು ಯೋಜನೆಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿದರು.

ತಾಪಂ ಸಹಾಯಕ ನಿದರ್ೇಶಕ(ನರೇಗಾ) ಸಂತೋಷ ಚವ್ಹಾಣ್, ಸಹಾಯಕ ನಿದರ್ೇಶಕ(ಪಂ.ರಾ) ಅರುಣಕುಮಾರ ಪಾಟೀಲ್, ಎಡಿಪಿಸಿ ದೀಪಕ ಕಡಿಮನಿ, ರಾಕೇಶ ಐನೋಳಿ, ಟಿಸಿ ಸುಧಾಕರ ಪಾಟೀಲ್, ಐಇಸಿ ಸಂಯೋಜಕ ವೀರಾರೆಡ್ಡಿ, ಟಿಎಇ ಶ್ರೀಕಾಂತ ಪಾಟೀಲ್ ಇತರರಿದ್ದರು.