ಹಾಸನ : ಜಿಲ್ಲೆಯು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ಜಿಲ್ಲೆಯಾಗಿ, ಹೊರಹೊಮ್ಮಲು ಎಲ್ಲರು ಶ್ರಮಿಸಬೇಕಾಗಿದ್ದು, ಸಾರ್ವಜನಿಕರ ಸಹಾಕರ ಅತೀ ಮುಖ್ಯ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜು ತಿಳಿಸಿದರು.
ಜಿಲ್ಲಾ ಪಂಚಾಯತ್‌ನ ಸಂಪನ್ಮೂಲ ಕೇಂದ್ರದಲ್ಲಿ ಸೋಮವಾರ ಎನ್‌ಆರ್‌ಎಲ್‌ಎಂ-ಎಸ್‌ಬಿಎಂ ಯೋಜನೆಗಳ ಅಡಿಯಲ್ಲಿ ಘನ, ದ್ರವ, ತ್ಯಾಜ್ಯ ವಿಂಗಡಣೆ ಹಾಗೂ ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಉದ್ಘಾಟಿಸಿ ಮಾತನಾಡಿ ಪ್ಲಾಸ್ಟಿಕ್ ನಿರ್ವಹಣೆ ಮತ್ತು ಕೃಷಿ ಪೌಷ್ಠಿಕ ತೋಟದ ಮಹತ್ವ ತಿಳಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪುನೀತ್, ಯೋಜನಾ ನಿರ್ದೇಶಕ ಪರಪ್ಪಸ್ವಾಮಿ, ಸಹಾಯಕ ಯೋಜನಾ ಅಧಿಕಾರಿ ರವಿ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಮಂಜುನಾಥ್, ನಿಟ್ಟೂರಿನ ಪಿಎಚ್‌ಸಿ ವೈದ್ಯಾಧಿಕಾರಿಗಳು ಎಚ್.ಎಸ್ ಚಂದ್ರಶೇಖರ್, ಸಿದ್ದೇಶ್ವರ , ಐಟಿಐ ಕಾಲೇಜಿನ ಸಹಾಯಕ ಪ್ರಾಧ್ಯಪಕ ಅಹಮದ್ ಇತರರು ಇದ್ದರು