ರಾಯಚೂರು: ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಕೆನರಾ ಬ್ಯಾಂಕ್ ಸದಾ ಮುಂದಿದ್ದು, ಗ್ರಾಹಕ ಸ್ನೇಹಿ ವಾತಾವರಣವನ್ನು ಬ್ಯಾಂಕ್‌ನಲ್ಲಿ ಕಲ್ಪಿಸಲಾಗುತ್ತಿದೆ ಎಂದು ಕೆನರಾ ಬ್ಯಾಂಕ್‌ನ ಹುಬ್ಬಳ್ಳಿ ವೃತ್ತ ಕಚೇರಿಯ ಉಪ ವ್ಯವಸ್ಥಾಪಕ ಐ.ಪಾಂಡುರಂಗ ಮಿತ್ತಂತಾಯ ಹೇಳಿದರು.
ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ಕೆನರಾ ಬ್ಯಾಂಕ್‌ನಿಂದ ಬುಧವಾರ ಏರ್ಪಡಿಸಿದ್ದ ಗ್ರಾಹಕರ ಸಭೆಯಲ್ಲಿ ಮಾತನಾಡಿ, ಸೇವೆಗೆ ಸಂಬಂಸಿದಂತೆ ಗ್ರಾಹಕರಿಂದ ಯಾವುದೇ ದೂರು ಬಂದಲ್ಲಿ ತಕ್ಷಣ ನಿವಾರಿಸಲಾಗುತ್ತಿದ್ದು, ಸಮಸ್ಯೆಯಿದ್ದಲ್ಲಿ ನೇರವಾಗಿ ಅಕಾರಿಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.
ಬ್ಯಾಂಕ್‌ನಿಂದ ವಿವಿಧ ರೀತಿಯ ಸಾಲ ಸೌಲಭ್ಯವನ್ನು ನೀಡುವುದರ ಜತೆಗೆ ಗ್ರಾಹಕರಿಗೆ ಲಾಭದಾಯಕವಾಗಿರುವ ಠೇವಣಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅನುಕೂಲ ಕಲ್ಪಿಸಲಾಗಿದ್ದು, ಗ್ರಾಹಕರು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ವಿಭಾಗೀಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಎಂ.ಮಾಧವಿ ಬ್ಯಾಂಕ್‌ನಿಂದ ನೀಡಲಾಗುವ ಗೃಹ, ವಾಹನ ಮತ್ತು ಶಿಕ್ಷಣ ಸಾಲಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕ್‌ನ ಹಿರಿಯ ಗ್ರಾಹಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕ್ ವ್ಯವಸ್ಥಾಪಕರಾದ ಸತ್ಯಸಾಯಿ, ವೈ.ವಿ.ನಾರಾಯನ, ವಿವೇಕ ಪಟೇಲ್, ಬಾಲಕಿಷನ್ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.