ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ಬ್ಯಾಂಕ್ ಆಫ್ ಇಂಡಿಯಾದ ಹುಬ್ಬಳ್ಳಿ-ಧಾರವಾಡ ವಲಯದಿಂದ ನಗರದ ಖಾಸಗಿ ಹೋಟೆಲ್ನಲ್ಲಿ ಇತ್ತೀಚೆಗೆ ಗ್ರಾಹಕ ಸಂಪರ್ಕ ಸಭೆ ನಡೆಸಲಾಯಿತು.
ಬ್ಯಾಂಕ್ನ ಹು-ಧಾ ವಲಯ ವ್ಯವಸ್ಥಾಪಕಿ ತಾರಿಣಿ ಚರಣ ಸಾಹು ಮಾತನಾಡಿ, ಗ್ರಾಹಕರ ಅನುಕೂಲಕ್ಕಾಗಿ ಸಾಕಷ್ಟು ವಿಧದ ಬ್ಯಾಂಕಿಂಗ್ ಸೇವೆ ನೀಡಲಾಗುತ್ತಿದೆ. ರಿಟೇಲ್ ವ್ಯಾಪಾರ, ಎಂಎಸ್ಎಂಇ ಮತ್ತು ಕೃಷಿಗೆ ಸಾಲ ವಿತರಣೆಗೆ ಸಂಬಂಧಿಸಿದಂತೆ ಬ್ಯಾಂಕ್ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.
ಎಫ್ಜಿಎಂಒ ಹೈದರಾಬಾದ್ನ ಜನರಲ್ ಮ್ಯಾನೇಜರ್ ಮನೋಜ ಕುಮಾರ್ ಶ್ರೀವಾಸ್ತವ ಮಾತನಾಡಿ, ಗ್ರಾಹಕರ ಉಳಿತಾಯ ಠೇವಣಿ, ಚಾಲ್ತಿ ಠೇವಣಿ, ಅವಧಿ ಠೇವಣಿ, ಕ್ರೆಡಿಟ್ ಸೌಲಭ್ಯ ಮತ್ತು ಇತರ ಹಣಕಾಸು ಸೇವೆಗಳನ್ನು ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ನೀಡಲಾಗುತ್ತಿದೆ ಎಂದರು.
ಸಭೆಯಲ್ಲಿ 70ಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿದ್ದರು. ವಿವಿಧ ಸೇವೆಗಳ ಕುರಿತು ಬ್ಯಾಂಕ್ನ ಹಿರಿಯ ಅಧಿಕಾರಿಗಳು ತಿಳಿಸಿಕೊಟ್ಟರು. 3 ದಶಕಗಳಿಗೂ ಹೆಚ್ಚು ಕಾಲ ಬ್ಯಾಂಕ್ನೊಂದಿಗೆ ಸಂಪರ್ಕದಲ್ಲಿರುವ ಬ್ಯಾಂಕಿನ 20 ಜನ ಗ್ರಾಹಕರನ್ನು ಸನ್ಮಾನಿಸಲಾಯಿತು. ಉಪ ವಲಯ ವ್ಯವಸ್ಥಾಪಕ ಅಭಿನವ ಪಾಂಡ ವಂದಿಸಿದರು.