ಬಾಗಲಕೋಟೆ ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಶನಿವಾರ ಹಮ್ಮಿಕೊಂಡಿದ್ದ 'ಗ್ರಾಹಕ ಹಕ್ಕು ಮತ್ತು ಜಾಗೃತಿ'ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತದ(ಎಬಿಜಿಪಿ) ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಎಂ.ಜಿ.ದೀಕ್ಷಿತ ಮಾತನಾಡಿದರು. 
ಜಿಲ್ಲೆ

ಗ್ರಾಹಕ ಹಕ್ಕುಗಳ ಬಗ್ಗೆ ಅರಿವಿರಲಿ

ಬಾಗಲಕೋಟೆ: ಹಲವು ಕ್ಷೇತ್ರಗಳಲ್ಲಿ ಗ್ರಾಹಕ ಇಂದು ಒಂದಲ್ಲ ಒಂದು ರೀತಿಯಲ್ಲಿ ಮೋಸ ಹಾಗೂ ವಂಚನೆಗೆ ಒಳಗಾಗುತ್ತಿದ್ದಾನೆ. ಹೀಗಾಗಿ ಇವುಗಳ ಬಗ್ಗೆ ಗ್ರಾಹಕ ಎಚ್ಚರಿಕೆಯಿಂದ ಇರಬೇಕು ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತದ(ಎಬಿಜಿಪಿ) ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಎಂ.ಜಿ.ದೀಕ್ಷಿತ ಹೇಳಿದರು.

ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ,ಎಬಿಜಿಪಿ ಜಿಲ್ಲಾಘಟಕ ಮತ್ತು ಎನ್.ಎಸ್.ಎಸ್. ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ಗ್ರಾಹಕ ಹಕ್ಕು ಮತ್ತು ಜಾಗೃತಿ'ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳುವಳಿಕೆ ಇದ್ದಲ್ಲಿ ತಮಗಾಗುವ ಮೋಸವನ್ನು ತಡೆಯಬಹುದು. ಗ್ರಾಹಕರಿಗೆ ಈ ದಿಶೆಯಲ್ಲಿಅರಿವು ಮೂಡಿಸಿ ಅವರ ಹಿತರಕ್ಷಣೆಯನ್ನು ಮಾಡುವಉದ್ದೇಶ ಎಬಿಜಿಪಿ ಹೊಂದಿದ್ದು, ಗ್ರಾಹಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಎಬಿಜಿಪಿ ಕಾನೂನು ಸಲಹೆಗಾರ ಜಯತೀರ್ಥ ಕುಲಕರ್ಣಿ ಮಾತನಾಡಿ, ಗ್ರಾಹಕ ಮಾರುಕಟ್ಟೆ ರಾಜನಾಗಿದ್ದರೂ ಬಹಳಷ್ಟು ಜನರಿಗೆ ಮೋಸ ಹಾಗೂ ಅನುಚಿತ ವ್ಯವಹಾರಗಳ ಬಗ್ಗೆ ಕಲ್ಪನೆಯಿಲ್ಲ. ಇವರ ಹಿತಾಸಕ್ತಿಯನ್ನು ಕಾಪಾಡಲು ಇರುವ ಕಾನೂನಿನ ಬಗ್ಗೆ ಜನತೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಪ್ರಾಚಾರ್ಯ ಶ್ರೀನಿವಾಸ ನರಗುಂದ, ಗ್ರಾಹಕರು ತಮಗಾದ ಶೋಷಣೆಯ ವಿರುದ್ಧಧ್ವನಿ ಎತ್ತಬೇಕಾದರೆ ಅವರಿಗೆ ತಮಗಿರುವ ಹಕ್ಕುಗಳ ಬಗ್ಗೆ ಅರಿವು ಇರಬೇಕು. ವಿದ್ಯಾರ್ಥಿಗಳು ತಮ್ಮ-ತಮ್ಮ ಪರಿಸರದಲ್ಲಿ ಈ ವಿಷಯವಾಗಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವುದರ ಮೂಲಕ ಗ್ರಾಹಕರನ್ನು ಸಂಘಟಿಸುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳ ಜ್ಞಾನದಕ್ಷಿತಿಜವನ್ನು ವಿಸ್ತರಿಸಬಲ್ಲ ಇಂತಹ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಳ್ಳಲು ಸಲಹೆ ನೀಡಿದರು.

ಎನ್.ಎಸ್.ಎಸ್. ಅಽಕಾರಿಗಳಾದ ಎಸ್.ವೈ. ಬೊಮ್ಮಣ್ಣವರ,ಎಸ್.ಎಂ.ಹಡಪದ, ಜಂಟಿ ಕಾರ್ಯದರ್ಶಿ ಡಾ.ಎಸ್.ಬಿ.ಪರ್ವತೀಕರ, ಎಬಿಜಿಪಿ ಸದಸ್ಯೆ ಅರ್ಚನಾ ಬಳೂಲಮಠ ಇದ್ದರು. ಎಬಿಜಿಪಿ ಸದಸ್ಯರಾದ ಚಂದ್ರಕಲಾ ಪಾಟೀಲ ಮತ್ತು ಲತಾ ಶೀಲವಂತರ ಗ್ರಾಹಕಗೀತೆ ಸಾದರಪಡಿಸಿದರು. ಸಂಯೋಜಕ ಪ್ರೊ.ಎಸ್.ಎಸ್.ಹಂಗರಗಿ ಸ್ವಾಗತಿಸಿದರು. ಉಪನ್ಯಾಸಕಿ ಎಸ್.ಪಿ.ದೇಶಪಾಂಡೆ ನಿರೂಪಿಸಿದರು. ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಶ್ರವಣಾ ಸಿದ್ನಾಳ ವಂದಿಸಿದರು.