ಮೈಸೂರು: ಬಂಚಳ್ಳಿಹುಂಡಿಯ ಗ್ರಾಮೋಕ್ಸ್ ಪೇಪರ್ ಆ್ಯಂಡ್ ಬೋರ್ಡ್ಸ್ ಕಂಪನಿಯನ್ನು ಮುಚ್ಚುತ್ತಿರುವ ಕ್ರಮ ಖಂಡಿಸಿ ಕಾರ್ಮಿಕರು, ನೌಕರರು ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಾರ್ಖಾನೆಯಲ್ಲಿ ಸುವಾರು 120ಕ್ಕೂ ಹೆಚ್ಚು ಕಾಯಂ ನೌಕರರು, 175 ಗುತ್ತಿಗೆ ಕಾರ್ಮಿಕರು 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಕಾರ್ಮಿಕರಿಗೆ ಸರಿಂಾಗಿ ಭವಿಷ್ಯನಿಧಿ ವಂತಿಗೆ, ಕಳೆದ 20 ವರ್ಷಗಳಿಂದ ಬೋನಸ್ ನೀಡಿಲ್ಲ.
ಕಂಪನಿ 20 ವರ್ಷಗಳಿಂದಲೂ ಉತ್ತಮ ಲಾಭ ಗಳಿಸುತ್ತಾ ಬಂದಿದ್ದರೂ ಕನಿಷ್ಠ ಸೌಲಭ್ಯವನ್ನೂ ನೀಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಕಂಪನಿ ನಡೆಸಲು ಎಲ್ಲ ಸಾಧ್ಯತೆಗಳು ಇದ್ದಾಗಲೂ ಸಾರಿಗೆ ವೆಚ್ಚ ಹೆಚ್ಚಾಗಿದೆಂಬ ನೆಪ ಹೇಳಿ ಕಾರ್ಮಿಕರಿಗೆ ಅತ್ಯಲ್ಪ ಪರಿಹಾರ ನೀಡಿ ವಜಾಗೊಳಿಸುವ ಹುನ್ನಾರ ನಡೆಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕಂಪನಿ ಈವರೆಗೂ ಯಾವುದೇ ಸಾಲ ವಾಡಿಲ್ಲ. ಕಂಪನಿಯ ಆಸ್ತಿಯೇ 150 ಕೋಟಿ ರೂ. ಬೆಲೆ ಬಾಳುತ್ತದೆ. ಆಡಳಿತ ವರ್ಗದವರು ಕಂಪನಿ ಮುಚ್ಚಿ ಕಾರ್ಮಿಕರಿಗೆ ಪರಿಹಾರ ನೀಡದೆ ವಜಾಗೊಳಿಸಿ ಬೇರೆ ಹೆಸರಿನಲ್ಲಿ ಕಂಪನಿ ಪ್ರಾರಂಭ ವಾಡುವ ಉದ್ದೇಶ ಹೊಂದಿದ್ದಾರೆ.
ಆದ್ದರಿಂದ ಕಾರ್ಮಿಕರಿಗೆ ಸೂಕ್ತ ಪರಿಹಾರ ಹಾಗೂ ಮುಂದೆ ಬರುವ ಕಂಪನಿಯಲ್ಲಿ ಕೆಲಸ ಮುಂದುವರಿಸುವ ಲಿಖಿತ ಭರವಸೆ ದೊರೆಯಬೇಕು. ಅಲ್ಲಿವರೆಗೂ ಕಾರ್ಖಾನೆಗೆ ಸಂಬಂಧಿಸಿದ ಆಸ್ತಿಯ ವಿಷಯದಲ್ಲಿ ಯಾವುದೇ ರೀತಿ ಖಾತಾ ವರ್ಗಾವಣೆ, ತಿದ್ದುಪಡಿ, ವಿಂಗಡಣೆಗಳಿಗೆ ಅವಕಾಶ ನೀಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಡಳಿತ ನಿರ್ದೇಶನ ನೀಡಬೇಕು.
ಕಾರ್ಖಾನೆಯ ಆಡಳಿತ ವರ್ಗ ಹಾಗೂ ಕಾರ್ಮಿಕರ ಸಂಘದೊಂದಿಗೆ ಹೆಚ್ಚಿನ ಪರಿಹಾರದ ಕುರಿತು ಚರ್ಚಿಸಲು ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
ಕಾರ್ಖಾನೆಯನ್ನು ಏಕಾಏಕಿ ಮುಚ್ಚಿರುವುದರಿಂದ ಕಾರ್ಮಿಕರಿಗೆ ಹೆಚ್ಚಿನ ಪರಿಹಾರ ನೀಡಬೇಕು. ಕಾರ್ಖಾನೆಯ ಸ್ಥಳದಲ್ಲಿ ಮುಂದೆ ಇದೇ ವಾದರಿಯ ಯಾವುದೇ ಕಾರ್ಖಾನೆ ಅಥವಾ ಇದೇ ಕಾರ್ಖಾನೆ ಮರು ಪ್ರಾರಂಭಿಸಿದರೆ ಹಾಲಿ ಕೆಲಸ ವಾಡುತ್ತಿರುವ ಕಾರ್ಮಿಕರಿಗೆ ಹಾಲಿ ವೇತನದೊಂದಿಗೆ ಕೆಲಸದಲ್ಲಿ ಮುಂದುವರಿಸುವ ಕುರಿತು ಲಿಖಿತ ಒಪ್ಪಂದ ವಾಡಿಕೊಡಬೇಕು. ಕಾರ್ಮಿಕರ ಬೇಡಿಕೆಗಳು ಈಡೇರುವವರೆಗೂ ಕಾರ್ಖಾನೆಯ ಜಮೀನಿನ ದಾಖಲೆಗಳಲ್ಲಿ ಯಾವುದೇ ಬದಲಾವಣೆ ವಾಡಿಕೊಡಬಾರದು ಎಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡರಾದ ಬಿ.ಮಹದೇವಸ್ವಾಮಿ, ಮುದ್ದುಕೃಷ್ಣ, ಬಸವರಾಜ ನಾಯಕ, ಎಚ್.ಎಸ್.ಗಂಗಾಧರ್, ನಾಗೇಂದ್ರ, ಪಿ.ಶಿವಣ್ಣ, ಶಿವರಾಮು, ಪಿ.ಡಿ.ವಿಜಂುಕುವಾರ್, ಸುರೇಶ್, ಸಂತೋಷ್, ಅಭಿಲಾಷ್, ರವಿಕುವಾರ್, ಲೋಕೇಶ್, ನಿಂಗರಾಜು, ಸಿದ್ದರಾಜು, ಗೋಪಾಲ, ಎಐಯುಟಿಯುಸಿ ಜಿಲ್ಲಾ ಸಮಿತಿ ಸದಸ್ಯೆ ಪಿ.ಎಸ್.ಸಂಧ್ಯಾ, ಬಿ.ಎನ್.ಆಕಾಶ್ ಕುವಾರ್ ಇತರರಿದ್ದರು.