ಬಾಗಲಕೋಟೆ: ಕುಡಿಯುವ ನೀರು, ರಸ್ತೆ, ಚರಂಡಿ, ಸಮುದಾಯ ಭವನಗಳು, ವಿದ್ಯುತ್ ಪೂರೈಕೆ, ಶಾಲಾ ಕೊಠಡಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಬಾಗಲಕೋಟೆ ಮತಕ್ಷೇತ್ರದ ವಿವಿಧೆಡೆ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು, ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗಿದೆ. ಸರ್ಕಾರದ ಸಕಲ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸಲಾಗಿದೆ. ಗ್ರಾಮಗಳ ಅಭಿವೃದ್ಧಿಯಲ್ಲಿ ದೇಶದ ಪ್ರಗತಿ ಅಡಗಿದೆ. ಬಾಗಲಕೋಟೆ ಮತಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ಸಾವಿರಾರು ಕೋಟಿ ರೂ.ಅನುದಾನ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಸಂಗಣ್ಣ ಕಲಾದಗಿ, ಸುರೇಶ ಕೊಣ್ಣೂರ, ಈರಪ್ಪ ಕಲಾದಗಿ, ಪಾಂಡಪ್ಪ ಬಾಳನ್ನವರ, ಶೇಖರಪ್ಪ ಮಿಕ್ಕಲ್, ಬಾಬು ರಾತೋಢ, ಶಂಕ್ರಪ್ಪ ರಾಂಪುರ, ಸಿದ್ದಪ್ಪ ತೋಟಗೇರ, ಸಿದ್ದಪ್ಪ ವಾಲಿಕಾರ, ರಾಚಪ್ಪ ಬೀಳಗಿ, ಲಾವಪ್ಪ ಕಪಲಿ ಸೇರಿದಂತೆ ಇತರರು ಇದ್ದರು.