ಬಾಗಲಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ನಾಟಕಗಳ ವಿಭಿನ್ನ ನೆಲೆಗಳು ಕುರಿತು ಒಂದು ದಿನದ ರಾಜ್ಯಮಟ್ಟದ ಸಂಶೋಧನಾ ಕಮ್ಮಟ ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ಹಾಗೂ ನಾಟಕ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಉದ್ಘಾಟಿಸಿದರು.  
ಜಿಲ್ಲೆ

ಗ್ರಾಮೀಣ ಸೊಗಡೆ ಕನ್ನಡ ನಾಟಕಗಳ ಜೀವಾಳ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಜಾನಪದ ಹಾಗೂ ಶಾಸ್ತಿçÃಯ ಕಾವ್ಯ ಕೃತಿಗಳನ್ನು ಮರು ವ್ಯಾಖ್ಯಾನಿಸಿ, ವಿಭಿನ್ನವಾಗಿ ಕಟ್ಟಿಕೊಡುವ ವಿಶಿಷ್ಠ ಸಾಮರ್ಥ್ಯ ಕನ್ನಡ ಕವಿಗಳಿಗೆ ಮಾತ್ರ ದಕ್ಕಿದ್ದು, ಆ ಪರಂಪರೆಯ ಮುಂದುವರಿಕೆಯಾಗಿ ನಾವು ಕನ್ನಡ ನಾಟಕಗಳ ಬೆಳೆದು ಬಂದ ಬಗೆಯಲ್ಲಿ ಕಂಡುಕೊಳ್ಳಬಹುದಾಗಿದೆ. ಗ್ರಾಮೀಣ ಸೊಗಡೆ ಕನ್ನಡ ನಾಟಕಗಳ ಜೀವಾಳವಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ಹಾಗೂ ನಾಟಕ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಹೇಳಿದರು.

ನವನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಟಕ ವಿಭಾಗ, ಗುಳೆದಗುಡ್ಡದ ರಾಷ್ಟಿçÃಯ ಸಂಶೋಧನಾ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ನಾಟಕಗಳ ವಿಭಿನ್ನ ನೆಲೆಗಳು ಕುರಿತು ಒಂದು ದಿನದ ರಾಜ್ಯಮಟ್ಟದ ಸಂಶೋಧನಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನಾಟಕಗಳ ಕಥಾವಸ್ತುವಿಗೆ ಮೂಲ ಬೇರು ಸಿಗುವುದು ನಮ್ಮ ಗ್ರಾಮೀಣ ಭಾಗದ ಜನ ಸಮುದಾಯದ ನಿತ್ಯದ ಸಂಹವನ. ಸಂಭಾಷಣೆ, ಹಾವ ಭಾವಗಳ ಅನುಕರಣೆ ಮೂಲಕ ನೆಲೆ ಕಂಡುಕೊAಡದ್ದಾಗಿದೆ. ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಿದಾಗ ಕನ್ನಡ ನಾಟಕ ಕ್ಷೇತ್ರಕ್ಕೆ ಸಂಬAಽಸಿದAತೆ ನಟನೆ ಮತ್ತು ಅಭಿನಯಕ್ಕೆ ಸೂಕ್ಷ÷್ಮವಾದ ವ್ಯತ್ಯಾಸ ಗುರುತಿಸಬಹುದಾಗಿದೆ. ಒಬ್ಬರು ಹೇಳಿದಂತೆ ನಟಿಸುವುದು ನಟನೆಯಾದರೆ, ಅನುಭವಿಸಿ ಅಭಿವ್ಯಕ್ತಿಸುವುದು ಅಭಿನಯವಾಗಿದೆ. ಅಭಿನಯದ ಮೂಲಕ ಅಭಿವ್ಯಕ್ತಿಗೊಂಡ ಕಲೆಯೇ ನಾಟಕವೆನಿಸಿಕೊಳ್ಳುತ್ತದೆ ಎಂದರು.

ರಾಷ್ಟೀಯ ಸಂಶೋಧನಾ ವೇದಿಕೆಯ ಗೌರವಾಧ್ಯಕ್ಷ ಡಾ.ಸಂಗಮೇಶ ಕಲ್ಯಾಣಿ ಮಾತನಾಡಿ, ಸಮಾಜದ ಏರುಪೇರುಗಳನ್ನು ತಿದ್ದುವ, ತಿಳುವಳಿಕೆ ನೀಡುವ, ಅರಿವು ಮೂಡಿಸೂವ ವಿಷಯಗಳ ಮೇಲೆ ನಾಟಕ ರಚನೆ, ಅಭಿನಯ, ಅನುಭವಗಳ ಮಾತು ಎಲ್ಲವೂ ಬೇಕಾಗುತ್ತದೆ. ಹಳಗನ್ನಡದ ಚಂಪೂ ಕಾವ್ಯಗಳನ್ನು ಓದಿದರೆ ಹತ್ತಾರು ಕನ್ನಡ ನಾಟಕ ಬರೆಯಬಹುದು. ನಾಟಕ ರಚನೆಯಲ್ಲಿ ಹೆಚ್ಚು ಅನುಭವ ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಮಾತನಾಡಿ, ಕನ್ನಡ ನಾಟಕ ಪರಂಪರೆ ಶ್ರೀಮಂತವಾಗಿದೆ. ಕುವೆಂಪು ಅವರ ಶೂದ್ರ ತಪಸ್ವಿ, ಕಂಬಾರ ಅವರ ಶಿವರಾತ್ರಿ ಹಾಗೂ ಕಾರ್ನಾಡ ಅವರ ತಲೆದಂಡ ನಾಟಕಗಳಲ್ಲಿನ ವಸ್ತು ಅವುಗಳ ಮಹತ್ವ ತಿಳಿಸುವ ಉದ್ದೇಶವಾಗಿದೆ. ಇದರಿಂದ ನಮ್ಮ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗಿದೆ ಎಂದರು.

ಕನ್ನಡ ವಿಭಾದ ಸಹ ಪ್ರಾಧ್ಯಾಪಕ ಡಾ.ಜಿ.ಜಿ.ಹಿರೇಮಠ, ರಾಷ್ಟಿçÃಯ ಸಂಶೋಧನಾ ವೇದಿಕೆಯ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಸಂಶೋಧನಾ ಕಮ್ಮಟದಲ್ಲಿ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೊಡ, ಸಾಹಿತಿ ಡಾ.ಸಣ್ಣವೀರಣ್ಣ ದೊಡ್ಡಮನಿ, ಸಿ.ಎನ್.ಬಾಳಕ್ಕನವರ, ಪಾಂಡುರAಗ ಸಣ್ಣಪ್ಪನವರ, ಮಲ್ಲಿಕಾರ್ಜುನ ಸಜ್ಜನ, ಡಾ.ಮಲ್ಲಿಕಾರ್ಜುನ ಇಂಚಲ, ಡಾ.ಮೌನೆಶ ಕಮ್ಮಾರ, ಬಸವರಾಜ ಕುಂಬಾರ, ಡಾ.ವೀಣಾ ಕಲ್ಮಠ ಉಪಸ್ಥಿತರಿದ್ದರು. ಸಾವಿತ್ರಿ ಮುತ್ತಗಿ ಪ್ರಾರ್ಥನೆ ಮಾಡಿದರು, ಪ್ರೊ.ಪರಸಪ್ಪ ತಳವಾರ ಸ್ವಾಗತಿಸಿದರು. ಡಾ.ಸುಮಂಗಲಾ ಮೇಟಿ ನಿರೂಪಿಸಿದರು.