ಎನ್.ಆರ್.ಪುರ: ಕುಗ್ರಾಮದಲ್ಲಿ ಬೆಳೆದು ನೀಟ್‌ನಲ್ಲಿ 985ನೇ ರ‌್ಯಾಂಕ್ ಪಡೆದ ಸೃಜನ್ ವೈದ್ಯನಾಗಿ ಸೇವೆ ಸಲ್ಲಿಸುವಂತಾಗಲಿ. ಸೃಜನ್ ಸಾಧನೆಯಿಂದ ಇಡೀ ತಾಲೂಕು ಹೆಮ್ಮೆ ಪಡುವಂತಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ಗೌಡ ದಂಡಿನಮಕ್ಕಿ ಹೇಳಿದರು.
ರಾವೂರು ಮೀನುಕ್ಯಾಂಪ್ ನಿವಾಸಿ ಪರಿಮಳಾ ರಮೇಶ್ ಅವರ ಪುತ್ ಸೃಜನ್ ನೀಟ್ ಪರೀಕ್ಷೆಯಲ್ಲಿ 985ನೇ ರ‌್ಯಾಂಕ್ ಪಡೆದ ಹಿನ್ನೆಲೆಯಲ್ಲಿ ಬುಧವಾರ ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್‌ನಿಂದ ಅವರ ಮನೆಗೆ ತೆರಳಿ ನಮ್ಮೂರ ಹೆಮ್ಮೆ ಕಾರ್ಯಕ್ರಮದಡಿ ವಿದ್ಯಾರ್ಥಿಯನ್ನು ಪುರಸ್ಕರಿಸಿ ಮಾತನಾಡಿದರು. ಬಡತನದ ಕುಟುಂಬವಾದರೂ ಈತನ ಬೆನ್ನೆಲುಬಾಗಿ ನಿಂತು ವಿದ್ಯಾಭ್ಯಾಸ ಮಾಡಿಸುತ್ತಿರುವ ಪಾಲಕರ ಶ್ರಮ ಶ್ಲಾಘನೀಯ ಎಂದರು.
ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್ ಗೌಡ ಅರಗಿ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸುವ ಸಲುವಾಗಿ ನಮ್ಮೂರ ಹೆಮ್ಮೆ ಕಾರ್ಯಕ್ರಮ ಆಯೋಜಿಸುತ್ತ ಬರುತ್ತಿದ್ದೇವೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಂಜೇಶ್ ಬೀಳುವ, ಎಂ.ಪಿ.ಅಭಿಲಾಶ್ ಹಾಗೂ ನಿತಿನ್ ಹೊಸಗದ್ದೆ, ಮೀನುಕ್ಯಾಂಪಿನ ಯುವ ಮಿತ್ರರು ಇದ್ದರು.