ಬಾಗಲಕೋಟೆ: ಅನೇಕ ಸಮಸ್ಯೆ, ನೋವುಗಳನ್ನು ಅನುಭವಿಸುವ ಗ್ರಾಮೀಣ ಭಾಗದ ಜನರ ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರು ಒತ್ತು ನೀಡಬೇಕು. ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸಲು ಸಿಎಂ ಸಿದ್ದರಾಮಯ್ಯ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.
ತಾಲೂಕಿನ ಅಚನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡಿಎಂಎ-ï ಅನುದಾನ ಅಡಿಯಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾದ ಹೆಚ್ಚುವರಿ ಎರಡು ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಲಕರು ಮಕ್ಕಳ ಬಗ್ಗೆ ಹತ್ತಾರು ಕನಸು ಕಟ್ಟಿಕೊಂಡಿರುತ್ತಾರೆ. ಅವುಗಳನ್ನು ಸಾಕಾರಗೊಳಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಶಾಲೆಗಳ ಅಭಿವೃದ್ಧಿ, ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಇದರು ಸದ್ಬಳಕೆಯಾಗಬೇಕು. ಶಿಕ್ಷಕರು ತಮ್ಮ ಶಾಲೆಯ ಮಕ್ಕಳನ್ನು ಹೊಸ ಚಿಂತನೆ, ಸಂಶೋಧನೆ, ಆಲೋಚನೆಗೆ ಸಿದ್ಧಪಡಿಸಬೇಕು. ಸಮಾಜ, ದೇಶಕ್ಕೆ ಕೊಡುಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಗೌರಮ್ಮ ಬಳಬಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಆರ್.ಪಿ.ಮಾಚಾರ, ಸಿದ್ದಪ್ಪ ಕೊಡಬಾಗಿ,ಶೇಖರಗೌಡರ ಪಾಟೀಲ, ನಿರ್ಮಿತಿ ಕೇಂದ್ರದ ಯೋಜನಾಽಕಾರಿ ಎಸ್.ಎನ್.ಹಿರೇಮಠ, ಶಿಕ್ಷಣ ಇಲಾಖೆ ಸಂಯೋಜಕ ಎನ್.ಬಿ.ಕಮ್ಮಾರ, ಚಂದನಗೌಡ ಗೌಡರ, ಚಂದ್ರು ಲಮಾಣಿ, ಪುಡಂಲಿಕ ಬಾಡಗಿ, ಚಿದಾನಂದ ನಾಯಕ, ಸಿದ್ದಣ್ಣಗೌಡ ಗೌಡರ ಇತರರು ಇದ್ದರು.