ಜಿಲ್ಲೆ

ಗ್ರಾಮೀಣ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ

Davangere - Prakash Arali

ಚನ್ನಗಿರಿ: ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಸಿಗಬೇಕಿದೆ ಎಂದು ಪಾಂಡೋಮಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಲಿಂಗರಾಜ್ ತಿಳಿಸಿದರು.
ತಾಲೂಕು ಪಾಂಡೋಮಟ್ಟಿ ಗ್ರಾಮದ ನವೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2023- 24ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.
ಪಾಲಕರು ಹಾಗೂ ಶಾಲಾ ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಿ ಹೊರತರುವಂಥ ಕೆಲಸ ಮಾಡಬೇಕು. ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕು ಎಂದರು.
ಎಲ್ಲ ಮಕ್ಕಳು ಸ್ಫರ್ಧಾ ಮನೋಭಾವದಿಂದ ಭಾಗವಹಿಸುತ್ತಾರೆ. ತೀರ್ಪುಗಾರರು ಭೇದ ಭಾವ ಮಾಡದೆ, ತೀರ್ಪು ಕೊಡಬೇಕು. ಇದರಿಂದ ನಿಜವಾದ ಪ್ರತಿಭೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಈ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗೆಲುವು ಸಾಧಿಸಿ ಶಾಲೆಗೆ ಉತ್ತಮ ಕೀರ್ತಿ ತರುತ್ತಾರೆ ಎಂದರು.
ಪ್ರತಿಭೆಗೆ ಬಡತನ, ಶ್ರೀಮಂತಿಕೆ, ಜಾತಿಗಳು ಅಡ್ಡಿ ಆಗುವುದಿಲ್ಲ. ಆಸಕ್ತ ವಿಷಯದಲ್ಲಿ ಆಸಕ್ತಿ ತೋರಿಸಿ ಶಾಲಾ ಶಿಕ್ಷಕರು ಹಾಗೂ ನುರಿತವರಿಂದ ಮಾರ್ಗದರ್ಶನ ಪಡೆದರೆ ಗುರಿ ತಲುಪಬಹುದು. ವಿದ್ಯಾರ್ಥಿಜೀವನ ವ್ಯರ್ಥ ಮಾಡಬಾರದು ಎಂದರು.
ಕ್ಷೇತ್ರ ಸಮಾನ್ವಯಾಧಿಕಾರಿ ಡಾ.ಎಸ್.ಶಂಕರಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಜಿ.ಜಗದೀಶ್, ಗ್ರಾಪಂ ಉಪಾಧ್ಯಕ್ಷ ಚನ್ನಬಸಪ್ಪ, ಸದಸ್ಯರಾದ ಚಂದ್ರಮ್ಮ, ಪ್ರದೀಪ್ ಪಾಟೀಲ್, ಲಕ್ಷಿ ್ಮೀಬಾಯಿ, ಗ್ರಾಮದ ಮುಖಂಡ ಎನ್.ಲೋಕೇಶ್ವರಪ್ಪ, ನವೋದಯ ಸಂಸ್ಥೆ ಕಾರ್ಯದರ್ಶಿ ಗೋವಿಂದರಾಜು, ಸಿಆರ್‌ಪಿ ತಿಪ್ಪೇಶಪ್ಪ ಇತರರಿದ್ದರು.