ಜಿಲ್ಲೆ

ಗ್ರಾಮೀಣ ಜನರಿಗೆ ಉಪಕಾರಿ ಧರ್ಮಸ್ಥಳ ಸಂಸ್ಥೆ

ಮಸ್ಕಿ: ಪ್ರತಿ ಗ್ರಾಮದಲ್ಲಿರುವ ದೇವಸ್ಥಾನಗಳಲ್ಲಿ ಸತ್ಸಂಗ, ಪ್ರವಚನ ನಡೆಯುವಂತಾಗಬೇಕು ಎಂದು ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎಂ.ಅಮರೇಶ ಹೇಳಿದರು.

ಗೋನ್ವಾರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೇಣುಕಾಚಾರ್ಯ ಮಠಕ್ಕೆ 2 ಲಕ್ಷ ರೂ.ದೇಣಿಗೆ ಚೆಕ್ ವಿತರಿಸಿ ಸೋಮವಾರ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರತಿ ಗ್ರಾಮದಲ್ಲಿ ಹಲವು ಯೋಜನೆ ರೂಪಿಸಿ ಗ್ರಾಮೀಣ ಜನತೆಗೆ ಉಪಕಾರಿಯಾಗಿದ್ದಾರೆ. ಗೋನ್ವಾರದಲ್ಲಿ ಕೆರೆ ಹೂಳೆತ್ತಲು 10 ಲಕ್ಷ ರೂ. ಕೊಟ್ಟಿದ್ದು, ಇಲ್ಲಿನ ಜನರಿಗೆ ಇದರಿಂದ ಸಾಕಷ್ಟು ಉಪಯೋಗವಾಗಿದೆ ಎಂದರು.