ಜಿಲ್ಲೆ

ಗ್ರಾಮೀಣ ಕ್ರೀಡೆಗಳನ್ನು ಉಳಿಸಿ

ಚಾಮರಾಜನಗರ: ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀಪ್ರತಾಪ್ ಹೇಳಿದರು.

ತಾಲೂಕಿನ ಮಂಗಲ ಗ್ರಾಮದಲ್ಲಿ ಭಗೀರಥ ಬಾಯ್ಸ್ ವತಿಯಿಂದ ಭಾನುವಾರ ಆಯೋಜಿಸಿದ ಶ್ರೀಭಗೀರಥ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ದೇಸಿ ಕ್ರೀಡೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ಮೂಲಕ ಶಕ್ತಿ ತುಂಬಬೇಕು. ಕ್ರೀಡೆಯಲ್ಲಿ ಸೋಲು- ಗೆಲುವು ಸಹಜ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.

ಆಜಾದ್ ಹಿಂದು ಸೇನೆ ಅಧ್ಯಕ್ಷ ಎಂ.ಎಸ್.ಫೃಥ್ವಿರಾಜ್ ಮಾತನಾಡಿ, ಕ್ರೀಡೆಯಲ್ಲಿ ಸೋಲು- ಗೆಲವು ಮುಖ್ಯವಲ್ಲ. ಕ್ರೀಡೆಯಲ್ಲಿ ಭಾಗವಹಿಸಬೇಕು ಮುಖ್ಯ. ಗ್ರಾಮೀಣ ಕ್ರೀಡೆಯಾದ ಕಬಡ್ಡಿ ದೇಶಕ್ಕೆ ಹೆಚ್ಚು ಹೆಸರನ್ನು ತಂದುಕೊಟ್ಟಿದೆ. ಇಂತಹ ಕ್ರೀಡಾ ಪಂದ್ಯಾವಳಿಗಳಿಂದ ಸ್ನೇಹ-ಭಾಂದವ್ಯ ವೃದ್ಧಿಯಾಗುತ್ತದೆ ಎಂದರು.

ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಯಾನಿಧಿ, ಶಮಿತ್, ಡೈರಿ ಅಧ್ಯಕ್ಷ ರಂಗಸ್ವಾಮಿ, ನಿರ್ದೇಶಕಿ ಭಾಗ್ಯ, ಗ್ರಾಪಂ ಸದಸ್ಯ ಸುರೇಶ್, ಮುಖಂಡರಾದ ರವಿ, ಕುಮಾರ್, ಪುಟ್ಟಣ್ಣ, ಮಾಧು ಮಂಗಲ, ಬಿಜೆಪಿ ಮುಖಂಡರಾದ ಪದ್ಮ, ಸರಸ್ವತಿ, ಬಸವರಾಜು, ಭಗೀರಥ ಬಾಯ್ಸ್ ಮನು, ಮನೋಜ್ ಕುಮಾರ್, ಸಂತೋಷ್ ಹಾಜರಿದ್ದರು.