filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43; 
ಜಿಲ್ಲೆ

ಗ್ರಾಮೀಣ ಕಲಾವಿದರ ಜೀವನವೇ ರಂಗಶಿಕ್ಷಣ

ಚಾಮರಾಜನಗರ: ಪ್ರಸ್ತುತ ಸಾಂಸ್ಕೃತಿಕ ಹಿನ್ನೆಲೆ ಇಲ್ಲದವರು ರಂಗಶಿಕ್ಷಣ ಪಡೆಯುತ್ತಿದ್ದು, ಗ್ರಾಮೀಣ ಕಲಾವಿದರಿಗೆ ಅವರ ಜೀವನವೇ ರಂಗಶಿಕ್ಷಣವಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ರೋಟರಿ ಭವನದಲ್ಲಿ ಜಿಲ್ಲಾ ರಂಗಭೂಮಿ ಕಲಾವಿದರು, ಚೇತನ ಕಲಾವಾಹಿನಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಜನರು ಇಂದಿಗೂ ರಂಗಭೂಮಿ ಕಲೆಯನ್ನು ಜೀವಂತವಾಗಿಟ್ಟಿದ್ದಾರೆ. ಹವ್ಯಾಸಿ ಕಲಾವಿದರು ಹಾಗೂ ಇನ್ನಿತರೆ ಸಂಘ-ಸಂಸ್ಥೆಗಳಿಂದ ರಂಗಭೂಮಿ ದಿನಾಚರಣೆ ಮಾಡಬಹುದು. ಆದರೇ ಗ್ರಾಮೀಣ ಭಾಗದ ಕಲಾವಿದರಲ್ಲರೂ ಒಂದುಗೂಡಿ ಈ ರಂಗಭೂಮಿ ದಿನಾಚರಣೆಯನ್ನು ಸಂಭ್ರಮಿಸುತ್ತಿರುವುರು ವಿಶೇಷವಾಗಿದೆ. ಗ್ರಾಮೀಣ ರಂಗಭೂಮಿಯಲ್ಲಿ ಅಸಾಮಾನ್ಯವಾದ ಹಾಡುಗಾರರಿದ್ದಾರೆ. ನಟನೆಯಲ್ಲೂ ಕೂಡ ಮೇಲುಗೈ ಸಾಧಿಸಿದ್ದಾರೆ ಎಂದರು.

ಪ್ರಸ್ತುತ ಸನ್ನಿವೇಶದಲ್ಲಿ ಪ್ರಶಸ್ತಿ ಪಡೆಯುವ ಉದ್ದೇಶದಿಂದ ನಾಟಕಗಳಲ್ಲಿ ಅಭಿನಯಿಸುವವರನ್ನು ಕಾಣುತ್ತೇವೆ. ಸರ್ಕಾರಗಳು ಗ್ರಾಮೀಣ ರಂಗಭೂಮಿಯಲ್ಲಿ ಸೇವೆ ಮಾಡುವವರಿಗೆ ಮಾತ್ರ ಪ್ರಶಸ್ತಿಗಳನ್ನು ನೀಡಬೇಕು. ಈ ಮೂಲಕ ನೈಜ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಈ ಕಲೆಯನ್ನು ಜೀವಂತವಾಗಿ ಬಿಟ್ಟುಹೋದ ನಮ್ಮ ಪೂರ್ವಜರನ್ನು ನೆನೆಯುವುದು ಹಾಗೂ ಹಿರಿಯ ರಂಗಭೂಮಿ ಕಲಾವಿದರನ್ನು ಗೌರವಿಸುವುದು ಈ ದಿನದ ಔಚಿತ್ಯಪೂರ್ಣವಾಗಿದೆ ಎಂದರು.

ಈ ಸಂದರ್ಭದಲ್ಲಿ ರಂಗಭೂಮಿಗೆ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಾದ ದಡದಹಳ್ಳಿ ಸೂರ್ಯಮೂರ್ತಿ, ಮಂಗಲ ಆರ್.ಶಿವಣ್ಣ, ನಂಜೇದೇವನಪುರ ಪಿ.ರಾಜಶೇಖರಪ್ಪ ಹಾಗೂ ಶಿವಪುರ ಶಿವಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಹಾಗೂ ನಾಟಕಕಾರ ಬಿ.ಎಸ್.ವಿನಯ್, ರೋಟರಿ ಸಂಸ್ಥೆ ಅಧ್ಯಕ್ಷ ನಾಗರಾಜ್, ರಂಗಭೂಮಿ ಕಲಾವಿದ ಜನ್ನೂರು ರೇವಣ್ಣ, ಚೇತನ ಕಲಾವಾಹಿನಿ ಅಧ್ಯಕ್ಷ ಜಿ.ರಾಜಪ್ಪ, ರಂಗಭೂಮಿ ಕಲಾವಿದರಾದ ಬಸವರಾಜು, ಪುರುಷೋತ್ತಮ್, ಲಿಂಗರಾಜು, ಮಹದೇವ್, ಸಂಪತ್ ಕುಮಾರ್, ಕುಮಾರ್, ಮಹೇಂದ್ರ, ಮಲ್ಲಿಕಾರ್ಜುನಸ್ವಾಮಿ, ಶಿವಕುಮಾರ್, ರಿದಂ ರಾಮಣ್ಣ, ನಿಂಗಯ್ಯ, ಗೋವಿಂದರಾಜು ಹಾಗೂ ಇತರರು ಉಪಸ್ಥಿತರಿದ್ದರು.