ಜಿಲ್ಲೆ

ಗ್ರಾಮಸ್ಥರಿಂದಲೇ ಬಸ್ ತಂಗುದಾಣ ನಿರ್ಮಾಣ

ಯಲ್ಲಾಪುರ: ತಾಲೂಕಿನ ಹೊಸಳ್ಳಿಯಲ್ಲಿ ಸರ್ಕಾರದ ಧನ ಸಹಾಯ ಪಡೆಯದೆ ಗ್ರಾಮಸ್ಥರೇ ಸ್ವತಃ ಬಸ್ ತಂಗುದಾಣವನ್ನು ನಿರ್ವಿುಸಿಕೊಂಡು ಮಾದರಿಯಾಗಿದ್ದು, ವಿಜಯ ದಶಮಿಯಂದು ಬಸ್ ತಂಗುದಾಣವನ್ನು ಉದ್ಘಾಟಿಸಿದ್ದಾರೆ.

ಹುಬ್ಬಳ್ಳಿ-ಯಲ್ಲಾಪುರ ಮಾರ್ಗದಲ್ಲಿ ಹೊಸಳ್ಳಿ ಸಮೀಪ ಬಸ್ ತಂಗುದಾಣದ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಕುರಿತು ಹಲವು ವರ್ಷಗಳಿಂದ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ನೀಡುತ್ತ ಬಂದಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಜನರು ಕೇವಲ ಒಂದು ವಾರದಲ್ಲಿ ತಂಗುದಾಣವನ್ನು ನಿರ್ವಿುಸಿದ್ದಾರೆ. ಶಿಕ್ಷಕ ನಾರಾಯಣ ಕಾಂಬಳೆ ಇದಕ್ಕೆ ಮಾರ್ಗದರ್ಶನ ನೀಡಿದ್ದು, ತಂಗುದಾಣದಲ್ಲಿ ಊರಿನ ಸಂಸೃ್ಕ, ಬೇಸಾಯ ಮತ್ತು ಹಾಲು ಉತ್ಪಾದನೆ ಕೇಂದ್ರದ ಚಿತ್ರಗಳನ್ನು ಬಿಡಿಸಲಾಗಿದೆ.

ಊರ ಜನರೆ ಹಣ, ಅಗತ್ಯ ಸಾಮಗ್ರಿ ಕೂಡಿಸಿ ಬಸ್ ತಂಗುದಾಣ ನಿರ್ವಿುಸಿದ್ದಾರೆ. ಮುಂದೆಯೂ ಮಾದರಿ ಕಾರ್ಯ ಮಾಡಲು ಯುವಕರು ಹಾಗೂ ಊರಿನ ಹಿರಿಯರು ಉತ್ಸಾಹದಲ್ಲಿದ್ದಾರೆ. ದಾನಿಗಳಿಗೂ ಹಾಗೂ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಇದರ ಶ್ರೇಯಸ್ಸು ಸಲ್ಲಬೇಕು. | ಸುನೀಲ ಕಾಂಬಳೆ ಹೊಸಳ್ಳಿ ಜೈ ಭೀಮ ಸ್ವಾಭಿಮಾನ ಬಳಗದ ಜಿಲ್ಲಾಧ್ಯಕ್ಷ