ಹಾಸನ: ಜಾನುವಾರುಗಳ ಮೇಲೆ ದಾಳಿ ಮಾಡಿ ಗ್ರಾಮಸ್ಥರಲ್ಲಿ ಬಾರಿ ಭಯದ ವಾತವರಣ ಸೃಷ್ಠಿ ಮಾಡಿದ ಮೂರ‌್ನಾಲ್ಕು ಚಿರತೆಯಲ್ಲಿ ಒಂದು ಚಿರತೆ ಅರಣ್ಯ ಇಲಾಖೆಯವರು ಇಟ್ಟದ ಬೋನಿಗೆ ಸಿಕ್ಕಿಬಿದ್ದಿರುವುದು ಸ್ಥಳಿಯರು ಸಲ್ಪಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.
ನಗರದ ಸಮೀಪ ಗವೇನಹಳ್ಳಿಯಲ್ಲಿರುವ ಗೆಂಡೆಕಟ್ಟೆ ಅರಣ್ಯದಾಮದ ಬಳಿ ಕೋಳಿ ಫಾರಂ ಪಕ್ಕದಲ್ಲಿ ಇಡಲಾಗಿದ್ದ ಬೋನಿಗೆ ಮೂರು ವರ್ಷದ ಚಿರತೆ ತಡರಾತ್ರಿ ಸೆರೆ ಸಿಕ್ಕಿದೆ. ಹಗಲು ರಾತ್ರಿ ಎನ್ನದೆ ಚಿರತೆ ಎಲ್ಲೆಂದರಲ್ಲಿ ತಿರುಗಾಡಿ ಸಾರ್ವಜನಿಕರಲ್ಲಿ ಭಯದ ವಾತವರಣ ನಿರ್ಮಾಣ ಮಾಡಿತ್ತು. ಸಾಕು ಹಾಗೂ ಬೀದಿ ನಾಯಿ,ಗೋವುಗಳ ಮೇಲೆ ಎರಗಿದಾಳಿ ಮಾಡುತಿತ್ತು.
ಕೋಳಿ ಫಾರಂ ಬಳಿ ಇದ್ದ ಸಿಸಿ ಕ್ಯಾಮಾರದಲ್ಲಿ ಚಿರತೆ ದೃಶ್ಯ ಸೆರೆಯಾಗಿತ್ತು. ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಅನೇಕ ಬಾರಿ ಗ್ರಾಮಸ್ಥರು ಒತ್ತಾಯಿಸಿದ್ದರು. ಆದರಿಂದ ಅರಣ್ಯ ಇಲಾಖೆಯವರು ಪುರುಷೋತ್ತಮ್ ಎಂಬುವವರ ಕೋಳಿ ಫಾರಂ ಪಕ್ಕದಲ್ಲೆ ಬೋನು ಇಟ್ಟಿದ್ದರು. ಶನಿವಾರದಂದು ಬೆಳಿಗ್ಗೆ ಸುಮಾರು ಮೂರು ವರ್ಷದ ಚಿರತೆ ಸೆರೆಯಾಗಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸೆರೆಯಾದೆ ಚಿರತೆಯನ್ನು ವಶಪಡಿಸಿಕೊಂಡರು.
ಗವೇನಹಳ್ಳಿಯ ಕೋಳಿ ಫಾರಂ ಮಾಲೀಕ ಸ್ವಾಮೀಗೌಡ ಮಾಧ್ಯಮದೊಂದಿಗೆ ಮಾತನಾಡಿ, ಭೈಪಾಸ್ ಬಳಿ ಇರುವ ಗೆಂಡೆಕಟ್ಟೆ ಅರಣ್ಯ ಸುತ್ತಮುತ್ತ ನಾಲ್ಕೈದು ಗ್ರಾಮಗಳಿದ್ದು, ಇಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಬೆಳಗಿನ ಜಾವ ಒಂದು ಚಿರತೆಯು ಅರಣ್ಯ ಇಲಾಖೆಯವರು ಇಟ್ಟ ಬೋನಿಗೆ ಬಿದ್ದಿದೆ. ಇನ್ನು ಮೂರ‌್ನಾಲ್ಕು ಚಿರತೆಗಳಿದ್ದು, ಇದರ ಉಪಟಳದಿಂದ ಇಲ್ಲಿ ನಾವು ಕೆಲಸ ಮಾಡಲು ಆಗುತ್ತಿಲ್ಲ. ಚಿರತೆ ಹೆದರಿಕೆಯಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ದಯಮಾಡಿ ಅರಣ್ಯ ಇಲಾಖೆಯವರು ಉಳಿದ ಚಿರತೆಗಳನ್ನು ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬೊಮ್ಮನಾಯಕನಹಳ್ಳಿಯಲ್ಲಿ ಹಸು ಮೇಲೆ ದಾಳಿ ಮಾಡಿದ್ದು, ನಮ್ಮ ಕೋಳಿ ಫಾರಂನಲ್ಲಿ ಸುತ್ತ ದೊಡ್ಡ ಚಿರತೆ ಕಾಣಿಸಿಕೊಂಡಿದೆ. ಜೊತೆಗೆ ಕಾಡಂದಿಗಳ ಹಾವಳಿ ಹೆಚ್ಚಿದ್ದು, ನಮ್ಮ ಬೆಳೆಗಳನ್ನೆಲ್ಲಾ ನಾಶ ಮಾಡುತ್ತಿದೆ.ನಮ್ಮ ಸಿಸಿ ಕ್ಯಾಮಾರದಲ್ಲಿ ಎಲ್ಲಾ ದೃಶ್ಯಗಳು ಸೆರೆಯಾಗಿವೆ.ಇದರಿಂದ ಜನರು ಭಯಭೀತರಾಗಿದ್ದಾರೆ ಎಂದರು.