ಕಿಟದಾಳ ಗ್ರಾಮದೇವಿ ದೇವಸ್ಥಾನಕ್ಕೆ ರತ್ನಾ ಆನಂದ ಮಾಮನಿ ಭೇಟಿ ನೀಡಿ ಶ್ರೀದೇವಿ ಆಶೀರ್ವಾದ ಪಡೆದರು. ಮುರುಘೇಂದ್ರ ಸ್ವಾಮೀಜಿ, ಡಾ. ನಯನಾ ಭಸ್ಮೆ, ಸುರೇಶ ಬುರ್ಜಿ ಇತರರು ಇದ್ದರು. 
ಜಿಲ್ಲೆ

ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ಸದಾ ಪ್ರೋತ್ಸಾಹ

ಮುನವಳ್ಳಿ, ಬೆಳಗಾವಿ: ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ರತ್ನಾ ಆನಂದ ಮಾಮನಿ ಅವರು ಶುಕ್ರವಾರ ಸಮೀಪದ ಕಿಟದಾಳ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದೇವಿ ಆಶೀರ್ವಾದ ಪಡೆದರು.
ವಿಧಾನಸಭೆ ಉಪಸಭಾಧ್ಯಕ್ಷರಾಗಿದ್ದ ದಿ. ಆನಂದ ಮಾಮನಿ ಅವರು ಕಿಟದಾಳ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಈಗ ಅವರ ಅಭಿವೃದ್ಧಿಯ ಕನಸನ್ನು ನನಸಾಗಿಸಲು ಅವರ ಸೇವೆ ಮುಂದುವರಿಸುವ ಅನಿರ್ವಾಯತೆ ನನ್ನ ಮೇಲಿದೆ. ತಮ್ಮೆಲ್ಲರ ಸಹಕಾರ ಹಾಗೂ ಆಶೀರ್ವಾದ, ಬೆಂಬಲ ಸದಾ ನಮ್ಮ ಮೇಲೆ ಇರಲಿ ಎಂದು ಮನವಿ ಮಾಡಿದರು.

ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಮುನವಳ್ಳಿ ಸೋಮಶೇಖರಮಠ ಮುರುಘೇಂದ್ರ ಸ್ವಾಮೀಜಿ, ಗ್ರಾಮದೇವಿ ಜಾತ್ರೆಯು ಪಾರಂಪರಿಕವಾಗಿ ನಡೆದು ಬಂದ ನಮ್ಮ ಸಂಸ್ಕೃತಿಯಾಗಿದೆ. ಜಾತ್ರೆಗಳು ನಮ್ಮನ್ನು ಒಗ್ಗೂಡಿಸುವ ಹಾಗೂ ಭಾರತೀಯ ಪರಂಪರೆ ಬಿಂಬಿಸುವ ಹಬ್ಬಗಳಾಗಿವೆ ಎಂದು ಹೇಳಿದರು.

ಡಾ. ನಯನಾ ಭಸ್ಮೆ, ಚಂದ್ರಶೇಖರ ಗೋಮಾಡಿ, ಸುರೇಶ ಬುರ್ಜಿ, ಶಿವಪ್ಪ ಬಂಡ್ರೊಳ್ಳಿ, ಭೀಮಪ್ಪ ಚಿಗರಿ, ಕೀರಪ್ಪ ಮುರಗೋಡ, ಶಿವಾಜಿ ನಲವಡೆ, ವಿಠ್ಠಲ ಕಲಕುಟ್ರಿ, ಉಮೇಶ ಶೀಲವಂತ, ವಿಠ್ಠಲ ಚಿಗರಿ, ಗೋವಿಂದನಾಯ್ಕ ಪಾಟೀಲ, ಸಂತೋಷ ತಲ್ಲೂರಮಠ, ಅನಸೂಯಾ ಗೋಮಾಡಿ, ಗುರುನಾಥ ಪತ್ತಾರ ಇತರರು ಇದ್ದರು.