ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮೀ ಅಮರಗೋಳ,ಉಪಾಧ್ಯಕ್ಷರಾಗಿ ರೇಖಾ ಕಡಿತೋಟ ಅವರು ಸನ್ಮಾನಿಸಿ ಗೌರವಿಸಲಾಯಿತು. 
ಜಿಲ್ಲೆ

ಗ್ರಾಮದ ಅಭಿವೃದ್ಧಿ ಆದ್ಯತೆ ನೀಡಿ

ಬಾಗಲಕೋಟೆ: ಗ್ರಾಮಗಳಲ್ಲಿ ಪಂಚಾಯತಿ ಮೂಲಕ ಮೂಲ ಸೌಕರ್ಯದೊಂದಿಗೆ ಗ್ರಾಮದ ಅಭಿವೃಧ್ಧಿ ಜೊತೆಗೆ ಸ್ವಚ್ಚತೆಗೆ ಆದ್ಯತೆ ನೀಡಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಬಿ.ವ್ಹಿ.ವ್ಹಿ.ಸಂಘದ ಮಿನಿ ಸಭಾಭವನದಲ್ಲಿ ದಲ್ಲಿ ಬೇವೂರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷ ,ಉಪಾಧ್ಯಕ್ಷರಿಗೆ ಸನ್ಮಾನಿಸಿ ಮಾತನಾಡಿದರು.
ಬೇವೂರು ಸೇರಿದಂತೆ ಗ್ರಾಮೀಣ ಭಾಗದಲ್ಲಿ ನಮ್ಮ ಅವದಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ, ನೂತನ ಅಧ್ಯಕ್ಷ ಉಪಾಧ್ಯಕ್ಷರು ಗ್ರಾಮದ ಅಭಿವೃದ್ಧಿ ದೃಷ್ಠಿಯಿಂದ ಕಾರ್ಯ ನಿರ್ವಹಿಸಿರಿ, ಗ್ರಾಮದ ಬೇಕು ಬೇಡಗಳನ್ನು ಗಮನದಲ್ಲಿಟ್ಟುಕೊಂಡು ಸೇವಾ ಮನೋಭಾವದಿಂದ ಕೆಲಸ ಮಾಡಿ, ಗ್ರಾಮದ ಸ್ವಚ್ಚತೆಗೆ ಆದ್ಯತೆ ನೀಡಿ ಎಂದರು.

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮೀ ಅಮರಗೋಳ,ಉಪಾಧ್ಯಕ್ಷರಾಗಿ ರೇಖಾ ಕಡಿತೋಟ ಅವರು ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ತುಕಾರಾಮ ಮಾಗಿ,ಹುಶೇನಸಾಭ ಅಮರಗೋಳ,ಮುದಿಯಪ್ಪ ಭಗವತಿ,ಬೀರಪ್ಪ ಬೈರಮಟ್ಟಿ,ಹೇಮಾವತಿ ಕಲೇರಿ,ಯಲ್ಲಮ್ಮ ಬಾರಕೇರ,ಶ್ರೀಧರ ಮಾದರ, ಸಂಗಪ್ಪ ಅಗಸಿಮನಿ, ಗ್ರಾಮದ ಮುಖಂಡರಾದ ಸಂಗಪ್ಪ ಮೂಗನೂರ,ಶಿವರಾಜ ವಾಡಕರ್, ಸಂಗಪ್ಪ ರಮಾದಂಡ,ರಾಮಣ್ಣ ಮಾದರ, ಶೇಖಪ್ಪ ಹೆರಕಲ್,ಪರಪ್ಪ ಗುನ್ನಿ,ಈರಪ್ಪ ಅಕ್ಕಿ,ಗೂಳನಗೌಡ ತೆಗ್ಗಿನಮಠ ಸೇರಿದಂತೆ ಅನೇಕರ ಇದ್ದರು.