ಕೆ.ಆರ್.ಸಾಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆ.ಆರ್.ಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪೊಲೀಸ್ ಇಲಾಖೆಯಿಂದ ನೇಮಕವಾಗಿರುವ ಯುವಪಡೆ ಸದಸ್ಯರ ಸಭೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಪುನೀತ್ ಮಾತನಾಡಿದರು. ಲಿಂಗರಾಜು, ಸಿದ್ದರಾಜು, ಗಣೇಶ್, ಡಾನ್‌ಹೆನ್ರಿ ಇತರರು ಇದ್ದರು.  
ಜಿಲ್ಲೆ

ಗ್ರಾಮಗಳಲ್ಲಿ ಅಕ್ರಮ ತಡೆಗೆ ಮಾಹಿತಿ ನೀಡಿ

Mandya

ಕೆ.ಆರ್.ಸಾಗರ: ಗ್ರಾಮಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ತಕ್ಷಣ ಮಾಹಿತಿ ನೀಡುವಂತೆ ಯುವಪಡೆ ಸದಸ್ಯರಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಪುನೀತ್ ಸಲಹೆ ನೀಡಿದರು.


ಕೆ.ಆರ್.ಸಾಗರದ ಖಾಸಗಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆ.ಆರ್.ಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪೊಲೀಸ್ ಇಲಾಖೆಯಿಂದ ನೇಮಕವಾಗಿರುವ ಯುವಪಡೆ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ದೂರು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.


ಕೆಲ ಅನಾಮಧೇಯ ವ್ಯಕ್ತಿಗಳು ಗ್ರಾಮಗಳಲ್ಲಿ ವಾಸ ಮಾಡುವುದು, ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದು, ದೇಶ ವಿರೋಧಿ ಚಟುವಟಿಕೆ ಕಂಡು ಬಂದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅಕ್ರಮ ತಡೆಗೆ ನೆರವಾಗಬೇಕು ಎಂದು ತಿಳಿಸಿದರು.


ಸ್ವಾತಂತ್ರ್ಯ ಹೋರಾಟಕ್ಕೆ ದೇಶದ ಜನರನ್ನು ಒಗ್ಗೂಡಿಸಲು ಆರಂಭವಾದ ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು. ಗಣಪತಿ ಪೆಂಡಾಲ್ ನಿರ್ಮಿಸಲು ಅನುಮತಿ ಪಡೆಯಬೇಕು. ತಪ್ಪಿದರೆ ಕಠಿಣ ಕ್ರಮ ಜರುಗಿಸಲಾಗುವುದು. ಗಣೇಶೋತ್ಸವ ಸಂದರ್ಭ ಯಾವುದೇ ಅವಘಡ ನಡೆಯದಂತೆ ಅನುಮತಿ ಪಡೆದ ಮುಖ್ಯಸ್ಥರೆ ಎಚ್ಚರಿಕೆ ವಹಿಸಬೇಕು. ಈ ಕುರಿತು ಗ್ರಾಮಗಳಲ್ಲಿ ಮಾಹಿತಿ ನೀಡಿ ಎಂದು ಕೋರಿದರು.


ಸಬ್‌ಇನ್ಸ್‌ಪೆಕ್ಟರ್ ಲಿಂಗರಾಜು, ಹುಲಿಕೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿದ್ದರಾಜು ಗಣೇಶ್, ಡಾನ್ ಹೆನ್ರಿ ಮತ್ತಿತರರು ಇದ್ದರು.