ಜಿಲ್ಲೆ

ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯ - ರಾಹುಲ ಜಾರಕಿಹೊಳಿ

ಉಳ್ಳಾಗಡ್ಡಿ-ಖಾನಾಪುರ: ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಯಾಗಬೇಕಾದರೆ ಗ್ರಾಮಸ್ಥರು ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಸಾಧ್ಯ ಎಂದು ಯುವ ಧುರೀಣ ರಾಹುಲ ಜಾರಕಿಹೊಳಿ ಹೇಳಿದರು.

ಪಾಶ್ಚಾಪುರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಶು ವೈದ್ಯಕೀಯ ಸೇವಾ ಇಲಾಖೆಯ ಆರ್‌ಐಡಿಎಫ್ ಯೋಜನೆಯಡಿ ಮಂಜೂರಾದ 38 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪಶು ಚಿಕಿತ್ಸಾಲಯ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಬಹುದನಗಳ ಬೇಡಿಕೆಯಾದ ಪಶು ಚಿಕಿತ್ಸಾಲಯ ಕಟ್ಟಡ ಉದ್ಘಾಟನೆಯಾಗಿದ್ದು, ರೈತರು ಇದರ ಲಾಭ ಪಡೆದುಕೊಂಡು ಹೈನುಗಾರಿಕೆ ಉದ್ಯಮ ಬೆಳಸಿಕೊಳ್ಳಬೇಕು ಎಂದರು.

ಪಾಶ್ಚಾಪುರ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್‌ಗನಿ ದರ್ಗಾ ಮಾತನಾಡಿ, ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಮನವಿ ಮಾಡಿದರು. ಡಾ. ಅಶೋಕ ಉಮನಾಬಾದಿಮಠ, ಜಿಪಂ ಮಾಜಿ ಸದಸ್ಯ ಮಂಜುನಾಥ ಪಾಟೀಲ, ಗ್ರಾಪಂ ಸದಸ್ಯ ಜಾಕೀರ್ ನದಾಫ್ ಮಾತನಾಡಿದರು. ಪಾಶ್ಚಾಪುರ ಗ್ರಾಪಂ ಉಪಾಧ್ಯಕ್ಷೆ ಮಲ್ಲವ್ವ ಸುಣಕುಪ್ಪಿ ಅವರು ಪಶು ಚಿಕಿತ್ಸಾಲಯ ಕಟ್ಟಡದ ಉದ್ಘಾಟನೆ ನೇರವೇರಿಸಿದರು.

ಗ್ರಾಪಂ ಸದಸ್ಯರಾದ ಬಸೀರ್‌ಅಹ್ಮದ್ ಅತ್ತಾರ, ಗೀತಾ ಉಪ್ಪಾರ, ಭೀಮಶಿ ನಿಪನಾಳ, ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಅಂಬಿಗೇರ, ದತ್ತಾತ್ರೇಯ ಹಜ್ಜೆ, ಎನ್.ಎಸ್. ಮೋಮಿನ್, ಮುಖಂಡ ವಿನೋಧ ಡೊಂಗ್ರೆ, ಮಾರುತಿ ಗುಟಗುದ್ದಿ, ಫಜಲ್ ಮಕಾನದಾರ, ಹಯಾತಚಾಂದ ಸನದಿ, ರತ್ನವ್ವ ಸೊಲ್ಲಾಪೂರಿ, ಬಾನು ನದಾಫ್, ವಂದನಾ ಬಸನಾಯ್ಕ, ಭೂಸೇನಾ ನಿಗಮದ ಎಇಇ ಆರ್.ಪಿ. ನಾರಾಯಣಕರ, ಅಮರ ಬಿರಡೆ, ಪಶು ವೈದ್ಯಾಧಿಕಾರಿ ಶೈನಾಜ್ ಮಹಿಮೂದ್, ಪಿಡಿಒ ಎಸ್.ಎಸ್.ಡಂಗ, ರೋಹಿತ ಆಡಿಮನಿ, ವಿನೋದ ಉವನಾಬಾದಿಮಠ, ಸರ್ಫರಾಜ್‌ಪೀರಜಾದೆ, ವಿಲಾಸ ಕೊಲೆ, ಅಡಿವೆಪ್ಪ ಕುಡಜೋಗಿ ಇತರರು ಇದ್ದರು.