ಚಿಟ್ಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದಿಂದ ಚಾಂಗಲೇರಾದವರೆಗೆ ಸುಮಾರು ೨.೫೦ ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ನಾಗಮ್ಮ ಜಗನ್ನಾಥ, ಸಂಧ್ಯಾ, ಗುರುನಾಥ ರಾಜಗೀರಾ, ಚಂದ್ರಯ್ಯ ಸ್ವಾಮಿ, ಶಿವಕುಮಾರ ಸ್ವಾಮಿ, ಮಲ್ಲಿಕಾರ್ಜುನ ಪಾಟೀಲ, ಶ್ರೀನಿವಾಸ ಪತ್ತಾರ ಇತರರಿದ್ದರು. 
ಜಿಲ್ಲೆ

ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಬದ್ಧ

ಚಿಟ್ಟಗುಪ್ಪ: ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿ ಕ್ಷೇತ್ರದ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ತಾವು ಬದ್ಧರಾಗಿರುವುದಾಗಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.

ಮುತ್ತಂಗಿ ಗ್ರಾಮದಿಂದ ಚಾಂಗಲೇರಾ ಗ್ರಾಮದವರೆಗೆ ಸುಮಾರು ೨.೫೦ ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ರಸ್ತೆ, ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಶಿಕ್ಷಣ ಸೇರಿ ಇತರೆ ಮೂಲಸೌಕರ್ಯಗಳನ್ನು ಒದಗಿಸುವುದು ನನ್ನ ಕರ್ತವ್ಯ. ಗ್ರಾಮೀಣ ಭಾಗದ ಪ್ರತಿಯೊಂದು ಕುಟುಂಬಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗಲು ಸಾಧ್ಯ. ಕೈಗಾರಿಕೆ, ಹೈನುಗಾರಿಕೆ, ಉಪ ಕಸುಬುಗಳನ್ನು ಮಾಡುವ ಮೂಲಕ ಅಭಿವೃದ್ಧಿಯತ್ತ ಸಾಗಬೇಕಿದೆ. ಇದಕ್ಕೆಲ್ಲ ಹಳ್ಳಿಗಳಿಗೆ ಉತ್ತಮ ರಸ್ತೆ ಮುಖ್ಯ. ಹೀಗಾಗಿ ಪ್ರತಿ ಗ್ರಾಮಗಳಿಗೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.

ಕಾಮಗಾರಿ ಗುಣಮಟದೊಂದಿಗೆ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮಸ್ಥರು ಸಹ ಸಹಕಾರ ನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ನಿಗಾ ವಹಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ನಾಗಮ್ಮ ಜಗನ್ನಾಥ, ಪಿಡಿಒ ಸಂಧ್ಯಾ, ಬಿಜೆಪಿ ಮಂಡಲ ಅಧ್ಯಕ್ಷ ಗುರುನಾಥ ರಾಜಗೀರಾ, ಪ್ರಧಾನ ಕಾರ್ಯದರ್ಶಿ ಚಂದ್ರಯ್ಯ ಸ್ವಾಮಿ, ಮುಖಂಡರಾದ ಶಿವಕುಮಾರ ಸ್ವಾಮಿ, ಮಲ್ಲಿಕಾರ್ಜುನ ಪಾಟೀಲ, ಶ್ರೀನಿವಾಸ ಪತ್ತಾರ, ಚನ್ನಬಸಪ್ಪ ಸೊಪ್ಪಣ್ಣ, ಜಗನ್ನಾಥ ಮಜಗೆ, ರವಿ ಸ್ವಾಮಿ, ಶಿವರಾಜ ಬಶೆಟ್ಟಿ, ಪ್ರಶಾಂತ ಸಿಂಧೋಲ, ನಾರಾಯಣರಾವ ದಾಸ, ಓಂಕಾರ ಮಜಗೆ, ಸಿದ್ದು ಬರಾನಪುರ, ಜಗನಾಥ ತಳಮಡಗಿ, ಶ್ರೀನಿವಾಸ, ಜಗದೀಶ ಕಾರಬಾರಿ, ಅಶೋಕ ಪಾಟೀಲ, ಶ್ರೀನಿವಾಸ ವಾಲೀಕರ, ಚಂದ್ರು, ರಮೇಶ, ಅನೀಲ, ಸುನೀಲ, ಗುಂಡಪ್ಪ ಇತರರಿದ್ದರು.