ಚಿತ್ರದುರ್ಗ: ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ ಎಂದು ತಾಪಂ ಇಒ ವೈ. ರವಿಕುಮಾರ್ ಹೇಳಿದರು. ತಾಪಂನಲ್ಲಿ ಬುಧವಾರ ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರ ವಸೂಲಿ ಮಾಡಿದ ಪಿಡಿಒ, ಸಿಬ್ಬಂದಿ ಸನ್ಮಾನಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರಗಳು ಕಾರ್ಯಕ್ರಮ, ಯೋಜನೆಗಳ ಉತ್ತಮ ಅನುಷ್ಠಾನಕ್ಕೆ ಹೊಸ ವರ್ಷದ ದಿನದಂದು ಸಂಕಲ್ಪ ಮಾಡಬೇಕು. ಉತ್ತಮವಾಗಿ ಕರ ವಸೂಲಿ ಮಾಡಿರುವ ಗ್ರಾಪಂಗಳಂತೆ ಇತರೆ ಗ್ರಾಪಂಗಳೂ ಉತ್ತಮ ಸಾಧನೆ ಮಾಡಬೇಕು ಂದು ತಿಳಿಸಿದರು.
ತೆರಿಗೆ ಸಂಗ್ರಹದಿಂದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯ. ಅಭಿವೃದ್ಧಿ, ಮೂಲಸೌಕರ್ಯ ಒದಗಿಸಲು ಹಾಗೂ ನೌಕರರ ಸಂಬಳಕ್ಕೆ ನೆರವಾಗುತ್ತದೆ ಎಂದರು.
ಜಿ.ಆರ್. ಹಳ್ಳಿ ಪಿಡಿಒ ಆನಂದ್ ಮಾತನಾಡಿ,ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರ ಸಹಕಾರದೊಂದಿಗೆ ಜನರ ಮನವೊಲಿಸಿ ತೆರಿಗೆ ವಸೂಲಿಯಲ್ಲಿ ಉತ್ತಮ ಸಾಧನೆ ಸಾಧ್ಯವಾಯಿತು ಎಂದರು.
ತಾಲೂಕಿನಲ್ಲಿ ಅತಿ ಹೆಚ್ಚು ಕರ ವಸೂಲಿ ಮಾಡಿರುವ ಆಲಗಟ್ಟ (ಶೇ.82.98), ಇಂಗಳದಾಳ್(ಶೇ.87.29), ಜಿ.ಆರ್.ಹಳ್ಳಿ (ಶೇ.84.47) ಮತ್ತು ಮಾಡನಾಯಕನಹಳ್ಳಿ (ಶೇ.86.28) ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಬಿಲ್ ಕಲೆಕ್ಟರ್‌ಗಳನ್ನು ಸನ್ಮಾನಿಸಲಾಯಿತು.
ತಾಪಂ ಸಹಾಯಕ ಲೆಕ್ಕಾಧಿಕಾರಿ ಕೆಂಚಪ್ಪ, ಯೋಜನಾಧಿಕಾರಿ ರಾಘವೇಂದ್ರ, ನರೇಗಾ ಮತ್ತು ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕರಾದ ಎಚ್. ಯರ‌್ರಿಸ್ವಾಮಿ, ರೂಪಾಕುಮಾರಿ, ವ್ಯವಸ್ಥಾಪಕ ಇರ್ಫಾನ್, ಎಂಐಎಸ್ ಸಂಯೋಜಕ ಉಮೇಶ್, ಐಇಸಿ ಸಂಯೋಜಕ ಸತ್ಯನಾರಾಯಣ, ಪಿಡಿಒಗಳಾದ ಆರ್. ಪಾತಣ್ಣ, ಮಹಾಲಕ್ಷ್ಮಿ ಹಾಗೂ ನಾಸೀರ್ ಮತ್ತಿತರರು ಇದ್ದರು.
ಕೋಟ್
ಜಿಪಂ ಸಿಇಒ ಸೂಚನೆ
ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಸೂಚನೆಯಂತೆ ತಾಲೂಕಿನ 38 ಗ್ರಾಪಂಗಳಲ್ಲಿ ಎಲ್ಲ ಸಿಬ್ಬಂದಿ ಕಳೆದ ಒಂದು ತಿಂಗಳಿ ಂದ ಅಭಿಯಾ ನದ ರೂಪದಲ್ಲಿ ಕರ ವಸೂಲಿ ಹಮ್ಮಿಕೊಂಡಿದ್ದರಿಂದ ಪ್ರಸಕ್ತ ಸಾಲಿನಲ್ಲಿ ಚಿತ್ರದುರ್ಗ ತಾಲೂಕಿನ 12.45 ಕೋಟಿ ರೂ.ಬೇಡಿಕೆಯಲ್ಲಿ 6.68 ಕೋ ಟಿ ರೂ.ಗಳೊಂದಿಗೆ ಡಿಸೆಂಬರ್‌ಅಂತ್ಯಕ್ಕೆ ಶೇ.53.70 ಕರ ವಸೂಲಾಗಿದೆ.
ವೈ.ರವಿಕುಮಾರ್,ಇಒ,ತಾಪಂ ಚಿತ್ರದುರ್ಗ.