ಸೇಡಂ: ಹಳ್ಳಿ ಅಭಿವೃದ್ಧಿಯಾದರೇ ದೇಶ ಅಭಿವೃದ್ಧಿ ಆಗುತ್ತದೆ. ಹೀಗಾಗಿ ನಿಮ್ಮ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಉತ್ತಮರನ್ನು ಆಯ್ಕೆ ಮಾಡಿ ಎಂದು ಈಶಾನ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಸಲಹೆ ನೀಡಿದರು.
ನೀಲಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರಮವಹಿಸುವ ವ್ಯಕ್ತಿಗಳನ್ನು ಆರಿಸಬೇಕಾದ ಜವಬ್ದಾರಿ ನಿಮ್ಮಲ್ಲೆರ ಮೇಲಿದೆ. ಪಕ್ಷದ ಕಾರ್ಯಕರ್ತರ ಎಲ್ಲೆಡೆ ಸಂಚರಿಸಿ ಬಿಜೆಪಿ ಬೆಂಬಲಿತರ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಪ್ರಮುಖರಾದ ಬಸವರಾಜ ರೆವಗೊಂಡ, ದೇವಿಂದ್ರ ನಾಯಿಕೋಡಿ, ಓಂಪ್ರಕಾಶ ಪಾಟೀಲ್, ಮಲ್ಲಿಕಾಜರ್ುನ ಗುಡ್ಡದ, ರಾಜಶೇಖರ ಪಾಟೀಲ್, ದೇವಪ್ಪ ನಾಯಿಕೋಡಿ, ಗಣೇಶ ಕಂಬಾರ, ವಿರೇಶ ಶೆಟ್ಟಿ, ಸಂದೀಪ ಪ್ಯಾಟಿ, ಶಿವಶರಣಪ್ಪ ಜಮದಾರ, ಬಸಲಿಂಗಪ್ಪ ಕೆಸರಟಗಿ, ಅಂಬಣ್ಣ ಪೂಜಾರಿ, ಶಂಕ್ರಪ್ಪ ಪಾಟೀಲ್ ಹೊಸಳ್ಳಿ, ಶ್ರೀಮಂತ ಪೂಜಾರಿ, ಈಶ್ವರಪ್ಪ ಕೆಸರಟಗಿ, ಸಾಬಣ್ಣ ಗುಡಿ ಇತರರಿದ್ದರು.