oppo_2 
ಜಿಲ್ಲೆ

ಗ್ರಾಮ ಸ್ವರಾಜ್ಯದ ಸಂಕಲ್ಪಕ್ಕೆ ಶಕ್ತಿ ತುಂಬಿ

ಕಲಬುರಗಿ: ಗ್ರಾಮ ಕೇಂದ್ರಿತ ಭಾರತ ದೇಶದಲ್ಲಿ ಹಳ್ಳಿಗಳು ಅಭಿವೃದ್ಧಿ ಆಗದೆ ದೇಶದ ಪ್ರಗತಿ ಕಾಣುವುದು ಅಸಾಧ್ಯ. ಆದ್ದರಿಂದ ಗ್ರಾಮ ಸ್ವರಾಜ್ಯವನ್ನು ಮಾಡುವ ಸಂಕಲ್ಪದೊAದಿಗೆ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದ್ದು, ಭಿನ್ನ, ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾಜಸ್ಥಾನದ ರೈತ ಮುಖಂಡ ದಶರಥಕುಮಾರ ತಿಳಿಸಿದರು.

ಗ್ರಾಮಗಳ ಅಭಿವೃದ್ಧಿಯೇ ರಾಷ್ಟçದ ಅಭಿವೃದ್ಧಿ ಎಂಬ ಮಹಾತ್ಮಗಾಂಧೀಜಿಯವರ ಆಶಯದಂತೆ ಎಲ್ಲರೂ ಗ್ರಾಮ ಸಶಕ್ತೀಕರಣ, ಸ್ವಾವಲಂಬಿತನಕ್ಕೆ ಪ್ರೋತ್ಸಾಹ ನೀಡಬೇಕು. ಗ್ರಾಮಗಳು ಖಾಲಿಯಾಗುತ್ತಿದ್ದು, ಉದ್ಯೋಗ ಅರಸಿ ಜನರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಪ್ರತಿವರ್ಷ ಸಹಸ್ರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

ಹಿಂದೆ ರಾಜಮನೆತನಗಳು ಗ್ರಾಮಗಳಲ್ಲಿ ಸ್ವಯಂ ಆಡಳಿತಕ್ಕೆ ಪ್ರೋತ್ಸಾಹಿಸುತ್ತಿದ್ದವು. ಆದರೆ ಪ್ರಸ್ತುತ ವಿಧಾನಸಭೆ, ಸಂಸತ್ತಿನಲ್ಲಿ ನಮ್ಮ ಗ್ರಾಮದಲ್ಲಿ ಏನಿರಬೇಕು ಎಂಬ ಚಿಂತನೆ ನಡೆದಿರುವುದು ದುರಂತ. ಈ ಪದ್ಧತಿ ದೂರಾಗಿ ಅಧಿಕಾರ ವಿಕೇಂದ್ರೀಕರಣ ಆಗಬೇಕು. ಗ್ರಾಮ ಪಂಚಾಯಿತಿಗಳ ಹಿಡಿತವನ್ನು ರಾಜಕಾರಣಿಗಳು ಬಿಡಬೇಕು ಎಂದು ಮನವಿ ಮಾಡಿದರು.
ಭಾರತದ ಆತ್ಮವೇ ಆಗಿರುವ ದೇಶದ ಆರು ಲಕ್ಷಕ್ಕೂ ಹೆಚ್ಚು ಗ್ರಾಮಗಳನ್ನು ಸ್ವಾವಲಂಬಿ ಮಾಡಲು ಶ್ರಮಿಸಲಾಗುತ್ತಿದೆ. ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿ, ಕೃಷಿ ಸಬಲೀಕರಣ ಮಾಡಬೇಕು. ಕಾರ್ಪೊರೇಟ್ ಕಂಪನಿಗಳ ಹಂಗಿಗೆ ಬಿದ್ದು, ಗ್ರಾಮಗಳನ್ನು ಮರೆಯಲಾಗುತ್ತಿದೆ. ಸರ್ಕಾರ ರಚಿಸುವ ಶಕ್ತಿ ಇರುವ ಹಳ್ಳಿಗರಿಗೆ ಅದರ ಲಾಭ ದೊರೆಯುತ್ತಿಲ್ಲ ಎಂದು ಹೇಳಿದರು.
ನವ ಕರ್ನಾಟಕ ರೈತ ಸಂಘದ ದಯಾನಂದ ಪಾಟೀಲ್ ಮಾತನಾಡಿದರು. ಪ್ರಮುಖರಾದ ಬಸವರಾಜ ಪಾದಯಾತ್ರಾ, ಎಂ.ಬಿ.ಜಗದೀಶ, ಮಹಾರಾಷ್ಟçದ ಬಂಧು ತಾಂಟೆ, ಮಹಾವೀರ ಜಯಂತಿ, ಪಿ.ಕೆ.ಚವ್ಹಾಣ್, ಬಸವರಾಜ, ಕೃಷ್ಣಮೂರ್ತಿ, ವಸಂತಕುಮಾರ, ಮಹ್ಮದ್ ಪಟೇಲ್, ನಾಗರಾಜ, ಮಾರುತಿ ಮರಿಯಪ್ಪ ಇತರರಿದ್ದರು.