ರಾಯಬಾಗ: ಕಾಂಗ್ರೆಸ್ ಸರ್ಕಾರ ಸೂರು ಕಲ್ಪಿಸದ ಹಿನ್ನೆಲೆಯಲ್ಲಿ ಬಡ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಬಿಜೆಪಿ ಸರ್ಕಾರದಿಂದಲೇ ಬಡವರ ಕಣ್ಣೀರು ವರೆಸುವ ಕೆಲಸವಾಗುತ್ತಿದೆ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.
ತಾಲೂಕಿನ ಕೆಂಪಟ್ಟಿ ಗ್ರಾಮದಲ್ಲಿ ಬಿ.ಆರ್.ಅಂಬೇಡ್ಕರ ಹಾಗೂ ಬಸವ ವಸತಿ ಯೋಜನೆಯಡಿ ಮಂಜೂರಾದ 40 ಮನೆಗಳ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು, ಫಲಾನುಭವಿಗಳು ಸ್ವಂತ ಹಣದಿಂದ ಶೌಚಗೃಹ ನಿರ್ಮಿಸಿ ಸ್ವಚ್ಛ ಗ್ರಾಮ ಮಾಡಲು ಸಹಕರಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ ಕುಂದರಗಿ, ಉಪಾಧ್ಯಕ್ಷ ಅಕ್ಕವ್ವ ಕಾಂಬಳೆ, ಶಿವಪ್ಪ ನಾಯಕ, ಮಹಾದೇವ ನಾಯಕ, ಕಸ್ತೂರಿ ನಾಯಕ, ಪಿಡಿಒ ಶ್ರೀಕಾಂತ ಯಡ್ರಾವಿ ಇತರರು ಇದ್ದರು.