ಜಿಲ್ಲೆ

ಗ್ರಾಮ ಪಂಚಾಯಿತಿ ಎಸ್‌ಡಿಎ ಮೇಲೆ ಲೋಕಾ ದಾಳಿ

ಬಾಗಲಕೋಟೆ: ನ್ಯಾಯಾಲಯದ ಪಾಲವಾಟ್ನಿ ಆದೇಶದ ಮೇರಿಗೆ ನಿವೇಶನದ ಉತಾರ ಪೂರೈಸಲು ೪೫೦೦ ರೂ. ಲಂಚ ಪಡೆಯುತ್ತಿದ್ದ ಕರಡಿ ಗ್ರಾಮ ಪಂಚಾಯಿತಿ ಎಸ್‌ಡಿಎ ಮೇಲೆ ಲೋಕಾಯುಕ್ತ ಅಽಕಾರಿಗಳು ದಾಳಿ ನಡೆಸಿದ್ದಾರೆ.

ಇಳಕಲ್ಲ ತಾಲೂಕಿನ ಕರಡಿ ಗ್ರಾಮ ಪಂಚಾಯಿತಿ ಎಸ್‌ಡಿಯ ಚಂದ್ರಶೇಖರ ಬೂದಿಹಾಳ ಲೋಕಾ ಬಲೆಗೆ ಬಿದ್ದ ಸರ್ಕಾರಿ ನೌಕರ. ಕರಡಿ ಪಂಚಾಯಿತಿ ವ್ಯಾಪ್ತಿಯ ಅಮರವಾಡಗಿ ಗ್ರಾಮದ ಆರ್‌ಸಿ ಕೇಂದ್ರದ ನಿವೇಶನವನ್ನು ನ್ಯಾಯಾಲಯದ ಆದೇಶದ ಮೇರಿಗೆ ಕುಷ್ಟಗಿ ತಾಲೂಕಿನ ಶಾಡಲಗೇರಿ ಗ್ರಾಮದ ಸದ್ದಾಹುಸೇನ್ ನದಾ-ï ಎನ್ನುವವರಿಗೆ ಉತಾರ ಪೂರೈಸಬೇಕಾಗಿತ್ತು. ಈ ಕೆಲಸ ಮಾಡಿ ಕೊಡಲು ಎಸ್‌ಡಿಎ ಚಂದ್ರಶೇಖರ ೪೫೦೦ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸದ್ದಾಹುಸೇನ್ ಅವರು ಬಾಗಲಕೋಟೆ ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಗುರುವಾರ ಕರಡಿ ಗ್ರಾಮ ಪಂಚಾಯಿತಿ ಎಸ್‌ಡಿಯ ಚಂದ್ರಶೇಖರ ಅವರು ಸದ್ದಾಹುಸೇನ್ ಅವರಿಂದ ೪೫೦೦ ರೂ. ಲಂಚ ಪಡೆಯುವಾಗಿ ಲೋಕಾ ದಾಳಿ ನಡೆಸಿ, ದಸ್ತಗಿರಿ ಮಾಡಿದ್ದಾರೆ. ಲೋಕಾಯುಕ್ತ ಅಽÃಕ್ಷಕ ಮಲ್ಲೇಶ್ ಟಿ. ಮಾರ್ಗದರ್ಶನದಲ್ಲಿ ರಮೇಶ್ ಕಾಂಬಳೆ, ಬಿ.ಕೆ.ಮುಕರ್ತಿಹಾಳ ಹಾಗೂ ಲೋಕಾ ಸಿಬ್ಬಂದಿ ದಾಳಿ ನಡೆಸಿದ್ದಾರೆ.