ಜಿಲ್ಲೆ

ಗ್ರಾಪಂನಿಂದ ವಿವಿಧ ಸೇವೆ ಪಡೆಯಲು ಸಲಹೆ

ಕದರೀಪುರ:ಕೋಲಾರ ತಾಲೂಕು ವೇಮಗಲ್​ ಹೋಬಳಿ ಮದ್ದೇರಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2024&25ನೇ ಸಾಲಿನ ಗ್ರಾಪಂ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ವಿವಿಧ ಮೂಲ ಸೌಕರ್ಯಗಳ ಒದಗಿಸುವಂತೆ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪಿಡಿಒ ಮತ್ತು ಅಧ್ಯಕ್ಷರ ನೇತೃತ್ವದಲ್ಲಿ ಚರ್ಚಿಸಿದರು.

ಗ್ರಾಮಗಳಲ್ಲಿ ಯಾವುದೇ ಸಮಸ್ಯೆಗಳು ಎದುರಾದಲ್ಲಿ ನೇರವಾಗಿ ಗ್ರಾಪಂ ಅಧ್ಯಕ್ಷ ಅಥವಾ ಉಪಾಧ್ಯಕ್ಷರ ಗಮನಕ್ಕೆ ತನ್ನಿ ಎಂದು ಅಧ್ಯಕ್ಷ ಡಿ.ಎನ್​.ಬಾಬು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಪಿಡಿಒ ಪಿ.ಬಿ.ರೇವಣ್ಣ ಅವರು, ಸಮಸ್ಯೆ ಇತ್ಯರ್ಥ ಆಗದಿದ್ದಲ್ಲಿ ನನ್ನ ಬಳಿ ಬಂದು ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಿ, ಇಲ್ಲೂ ಕೆಲಸ ಆಗದಿದ್ದರೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳಿಂದ ದೊರೆಯುವ ಹಲವು ಯೋಜನೆಗಳು, ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಕುರಿತು ವಿವರಣೆ ನೀಡಿದರು.

ಬೆಳೆ ಬೆಳೆಯಲು ಸಲಹೆ, ಸೌಲಭ್ಯಗಳು, ಬೆಳೆ ವಿಮೆ ಪಡೆಯುವ ವಿಧಾನ, ಸಂಬಂಧಪಟ್ಟ ಯೋಜನೆ ಸಾಲ, ಸಬ್ಸಿಡಿ ಸೇವೆ, ರೇಷ್ಮೆ ಬೆಳೆಗೆ ಡ್ರಿಪ್​ ಸಬ್ಸಿಡಿ, ರೇಷ್ಮೆ ಹುಳು ಸಾಕಣೆ,ಮನೆ ನಿರ್ಮಾಣ, ಗಿಡಗಳಿಗೆ ಬದು ನಿರ್ಮಾಣ, ಕುರಿ, ಕೋಳಿ, ಮೇಕೆ ಸಾಕಣೆ ಕೊಟ್ಟಿಗೆಗಳು, ಕೃಷಿ ಹೊಂಡ ನಿರ್ಮಾಣ, ಪಂಚಾಯಿತಿ ಹಂತದಲ್ಲಿ ಸಿಸಿ ರಸ್ತೆ, ಚರಂಡಿ, ಬೀದಿ ದೀಪಗಳು, ದನ&ಕರುಗಳ ಕೊಟ್ಟಿಗೆ, ಕುಡಿಯುವ ನೀರು, ವಸತಿ, ಮೂಲ ಸೌಕರ್ಯಗಳನ್ನು ಪಡೆದುಕೊಳ್ಳುವುದರ ಕುರಿತು ನಾಗರಿಕರಿಗೆ ಅರಿವು ಮೂಡಿಸುವಂತೆ ಅಧ್ಯರು, ಉಪಾಧ್ಯರು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ, ರೇಷ್ಮೆ, ತೋಟಗಾರಿಕೆಗೆ ಸಂಬಂಧಪಟ್ಟಂತೆ, ವೇಮಗಲ್​ ಹೋಬಳಿಮಟ್ಟದ ರೈತ ಸಂಪರ್ಕ ಕೇಂದ್ರ, ಕೃಷಿ, ರೇಷ್ಮೆ ಇಲಾಖೆಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಂಭಾಷಣೆ ನಡೆಸಿ ತಮಗೆ ಅವಶ್ಯ ಇರುವ ಸೇವೆಗಳು, ಕೆಲವು ಯೋಜನೆಗಳನ್ನು ನರೇಗಾ ಯೋಜನೆಡಿ ಪಡೆದುಕೊಳ್ಳಬೇಕು ಎಂದು ಗ್ರಾಪಂ ಅಧ್ಯ ಡಿ.ಎನ್​.ಬಾಬು ತಿಳಿಸಿದರು.

ರೇಷ್ಮೆ ಇಲಾಖೆ ವಿಸ್ತೀರ್ಣಾಧಿಕಾರಿ ಬ್ಯಾಟರಾಯಪ್ಪ, ರೈತ ಸಂಪರ್ಕ ಕೇಂದ್ರ ವೇಮಗಲ್​ ಕೃಷಿ ಅಧಿಕಾರಿ ಶ್ರೀನಿವಾಸ್​, ತೋಟಗಾರಿಕೆ ಇಲಾಖೆ ತಾಂತ್ರಿಕ ವ್ಯವಸ್ಥಾಪಕಿ ಲಾವಣ್ಯಾ, ಎಸ್​ಎ್​ಎಸ್​ಸಿಎಸ್​ ಅಧ್ಯ ಜಂಬಾಪುರ ವೆಂಕಟರರಾಂ, ಮಾಜಿ ಅಧ್ಯ ಎಂ.ಆರ್​.ಶ್ರೀನಿವಾಸಗೌಡ, ನಾಗರಾಜ್​ ಇತರರಿದ್ದರು.