ಅರಸೀಕೆರೆ: ತಾಲೂಕಿನ ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಮಂಗಳಾ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.23 ಸದಸ್ಯ ಬಲದ ಗ್ರಾಪಂನಲ್ಲಿ ಮಂಜುಳಾ ಜಯಣ್ಣ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಮಂಗಳಾ ಕುಮಾರ್ ಹೊರತುಪಡಿಸಿ ಯಾರೊಬ್ಬರೂ ಉಮೇದುವಾರಿಕೆ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಹಾಗೂ ತಾಪಂ ಇಒ ನಾಗರಾಜ್ ಆಯ್ಕೆ ಪ್ರಕಟಿಸಿದರು.
ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಹೊರಗೆ ನೆರದಿದ್ದ ಬೆಂಬಲಿಗರು ಸಿಹಿಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.ಅಗ್ಗುಂದ ಗ್ರಾಪಂ ಅಧ್ಯಕ್ಷ ಗಿರೀಶ್, ಪಿಡಿಒ ಶಿವಕುಮಾರ್, ಉಪಾಧ್ಯಕ್ಷ ಪುಟ್ಟಪ್ಪ,ಮಾಜಿ ಅಧ್ಯಕ್ಷೆ ಶಿಲ್ಪಾ ಗಂಗಾಧರ್,ವಸಂತ ಪುಟ್ಟಣ್ಣ, ಸ್ವರೂಪ ಮಂಜಣ್ಣ, ನಿಂಗರಾಜ್, ರಾಜಣ್ಣ ಸೇರಿ ಸದಸ್ಯರು ಹಾಗೂ ನಾಗರಿಕರು ಹಾಜರಿದ್ದರು.
ಭರವಸೆ: ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡ ಮಂಗಳಾ ಕುಮಾರ್ ಮಾತನಾಡಿ,ಎಲ್ಲ ಸದಸ್ಯರ ಸಹಕಾರದಿಂದ ನನಗೆ ಸಿಕ್ಕಿರುವ ಸದಾವಕಾಶವನ್ನು ಸದ್ಭಳಕೆ ಮಾಡಿಕೊಂಡು ಗ್ರಾಮ ಪಂಚಯಿತಿಯ ಪ್ರಗತಿಗೆ ಶ್ರಮಿಸುತ್ತೇನೆ. ನಾಗರಿಕರಿಗೆ ಅವಶ್ಯವಿರುವ ಕುಡಿಯುವ ನೀರು,ಶುಚಿತ್ವ ಕಾಪಾಡುವುದು,ರಸ್ತೆ, ಚರಂಡಿ ನಿರ್ಮಾಣ ಸೇರಿ ಎಲ್ಲ ಬಗೆಯ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.