ಜಿಲ್ಲೆ

ಗ್ರಾಪಂಗಳಲ್ಲಿ ಸ್ವಚ್ಛತೆ ಆದ್ಯತೆ ನೀಡಿ

ಹುಮನಾಬಾದ್​​​: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರದ ನಿರ್ದೇಶನದಂತೆ ಸೆಪ್ಟೆಂಬರ್​ ೧೫ರಿಂದ ಅಕ್ಟೋಬರ ೨ರವರೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಗ್ರಾಮಗಳನ್ನು ಸ್ವಚ್ಛ ಮತ್ತು ಸುಂದರವಾಗಿ ಮಾಡಬೇಕೆಂದು ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದರ ಕರೆ ನೀಡಿದರು.

ಹುಡಗಿ ಗ್ರಾಮದಲ್ಲಿ ಶನಿವಾರ ಪಂಚಾಯಿತಿಗಳಲ್ಲಿ ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು , ಗ್ರಾಮಸ್ಥರು ದಿನನಿತ್ಯದ ಬಳಕೆಗೆ ಸರಬರಾಜು ಆಗುವ ನೀರಿನ ಜಲಮೂಲಗಳ ಸುತ್ತಮುತ್ತಲು ಸ್ವಚ್ಛತೆ ಕಾಪಾಡುವುದರ ಜೊತೆಗೆ ಗ್ರಾಮಗಳಲ್ಲಿರುವ ತಿಪ್ಪಿಗುಂಡಿಗಳು ಸ್ಥಳಾಂತರ ಗೊಳಿಸಬೇಕು ಹಾಗೂ ಚರಂಡಿ ಸ್ವಚ್ಛತೆಗೊಳಿಸುವುದು, ಗ್ರಾಮದಲ್ಲಿ ನಿರ್ಮಾಣ ಮಾಡಿರುವ ನೀರಿನ ಟ್ಯಾಂಕುಗಳನ್ನು ಶುದ್ದಗೊಳಿಸಬೇಕು. ಗ್ರಾಮಗಳಲ್ಲಿ ಸೊಳ್ಳೆಗಳು ಆಗದಂತೆ ಬ್ಲೀಚಿಂಗï ಪೌಡರ್ಗಳನ್ನು ಹಾಕಬೇಕು ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ಯೋಗ್ಯವಾದ ನೀರನ್ನು ಗ್ರಾಮಸ್ಥರಿಗೆ ಉಪಯೋಗಿಸುವಂತೆ ಜನರಲ್ಲಿ ಅರಿವು ಮೂಡಿಸುವಂತಹ ಕೆಲಸ ಅಧಿಕಾರಿಗಳು ಮಾಡಬೇಕು, ಒಡೆದಿರುವ ನೀರಿನ ಪೈಪï ಲೈನï ದುರಸ್ತಿ ಮಾಡಬೇಕು ಎಂದರು.

ಗ್ರಾಮದಲ್ಲಿ ತೆಗ್ಗು ಗುಂಡಿಯಲ್ಲಿ ನಿಂತಿರುವ ನೀರನ್ನು ನಿಲ್ಲದಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು. ತಾ.ಪಂ ಸಹಾಯಕ ನಿರ್ದೇಶಕ ಜಗನ್ನಾಥ, ಪಿಡಿಒ ಶಿವರಾಜ ಮಂಗಲಗಿ, ಗ್ರಾಮ ಪಂಚಾಯತï ಅಧ್ಯಕ್ಷೆ ಅಂಬಮ್ಮಾ ಹನುಮಂತï, ಉಪಾಧ್ಯಕ್ಷ ಸಿದ್ದಿಕ್​ ಷಾ, ಸದಸ್ಯರಾದ ಸಂಗಮನಾಥ, ಮಲ್ಲಮ್ಮ, ವಿಜಯಲಕ್ಷ್ಮಿ, ರೀತಾ, ಆನಂದಕುಮಾರ ಸೈನಿರ, ರಾಜಶೇಖರï, ಜಿಲಾನಿ, ಪ್ರಭು ಮಾಳನಾಯಕ, ತಾ.ಪಂ ತಾಂತ್ರಿಕ ಸಂಯೋಜಕ ಸುಧಾಕರ ಪಾಟೀಲï , ತಾಂತ್ರಿಕ ಸಹಾಯಕ ರಾಘವೇಂದ್ರ, ಐಇಸಿ ಸಂಯೋಜಕ ಉಮೇಶ ಮಲಗಿ ಹಾಗೂ ಗ್ರಾಮ ಪಂಚಾಯತï ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.