oplus_2 
ಜಿಲ್ಲೆ

ಗ್ರಾಪಂಗಳ ಸಹಯೋಗದಲ್ಲಿ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ

  • ಚಿತ್ರದುರ್ಗ: ಶೀಘ್ರದಲ್ಲೇ ಗ್ರಾಪಂ ಸಹಯೋಗದೊಂದಿಗೆ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕುವ ಕಾರ‌್ಯ ಆರಂಭವಾಗಲಿದೆ ಎಂದು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎನ್.ಕುಮಾರ್ ಹೇಳಿದರು. ಜಿಪಂ,ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಪಶು ವೈದ್ಯಕೀಯ ಪ ರೀಕ್ಷಕರ ಸಂಘದ ಸಹಯೋಗದಲ್ಲಿ ನಗರದ ಒನಕೆ ಓಬವ್ವ ಕ್ರೀಡಾಭವನದಲ್ಲಿ ಶುಕ್ರವಾರ ಪಶು ವೈದ್ಯಕೀಯ ಪರಿವೀಕ್ಷಕರಿಗೆ ಹಮ್ಮಿಕೊಂ ಡಿದ್ದ ತಾಂತ್ರಿಕ ಸಮ್ಮೇಳನ ಹಾಗೂ ರೇಬಿಸ್ ರೋಗ ತಡೆಗಟ್ಟುವಿಕೆ ಕಾರ‌್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ಕೇವಲ 8-10ರೇಬಿಸ್ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಬಹು ಸಂಖ್ಯೆ ಪ್ರಕರಣಗಳು ದಾಖಲಾಗದೆ ಉಳಿಯುತ್ತಿವೆ. ಅಧಿಕಾರಿ ಗ ಳು ನಿರ್ಲಕ್ಷ್ಯವಹಿಸದೇ ಜಾನುವಾರುಗಳಿಗೆ ಬರುವ ಸಾಂಕ್ರಾಮಿಕ ರೋಗಗಳು ಹಾಗೂ ರೇಬಿಸ್ ಪ್ರಕರಣಗಳನ್ನು ತಪ್ಪದೇ ದಾಖಲಿಸಬೇ ಕು.ಸಾಕುಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸಬೇಕು. ಒಮ್ಮೆ ರೇಬಿಸ್‌ಗೆ ತುತ್ತಾದರೆ ಪ್ರಾಣಹಾನಿ ನಿಶ್ಚಿತವೆಂದು ಕುಮಾರ್ ಎಚ್ಚರಿಸಿದರು. ಕಾರ‌್ಯಕ್ರಮ ಉದ್ಘಾಟಿಸಿ ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗಸ್ವಾಮಿ,ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ಸಿ.ತಿಪ್ಪೇಸ್ವಾ ಮಿ ಮಾತನಾಡಿದರು. ಗಾಯತ್ರಿ ಕುಲಕರ್ಣಿ ಉಪನ್ಯಾಸ ನೀಡಿದರು. ರಾಜ್ಯ ಸರ್ಕಾರಿ ನೌಕಾರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ ಮು ದ್ದಜ್ಜಿ,ಕಾರ‌್ಯಾಧ್ಯಕ್ಷ ಬಿ.ಟಿ.ವಿಶ್ವನಾಥ,ಮುಖ್ಯ ಪಶುವೈದ್ಯಕೀಯ ಉಪ ನಿರ್ದೇಶಕ ಡಾ.ಎನ್.ಗಿರಿರಾಜ್,ಪಶು ವೈದ್ಯಕೀಯ ಪರಿವೀಕ್ಷಕರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ಆಂಜನೇಯ, ಪ್ರದಾನ ಕಾರ‌್ಯದರ್ಶಿಎ.ಆರ್.ತಿಪ್ಪೇಸ್ವಾಮಿ ಇತರರು ಇದ್ದರು. ----