ಜಿಲ್ಲೆ

ಗ್ರಾಪಂ ಸದಸ್ಯೆ ಬರ್ಬರ ಕೊಲೆ

ವಿಜಯವಾಣಿ ಸುದ್ದಿಜಾಲ ಮುಂಡಗೋಡ(ಉತ್ತರ ಕನ್ನಡ):

ಪಾಳಾ ಗ್ರಾಮ ಪಂಚಾಯಿತಿ ಸದಸ್ಯೆ ಅಕ್ಕಮ್ಮ ಬಸವರಾಜ ಮೇಲಿನಮನಿ ಅವರನ್ನು ಮಂಗಳವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.

ಗಂಡ ಬಸವರಾಜ ಮೇಲಿನಮನಿ ಕೊಲೆ ಮಾಡಿರುವ ಶಂಕೆ ಇದೆ. ಆತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥನಾಗಿದ್ದ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ‌, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ರವಾನಿಸಲಾಗಿದೆ.

ಕಾಂಗ್ರೆಸ್ ಬೆಂಬಲಿತ ಸದಸ್ಯೆಯಾಗಿರುವ ಚಿಕ್ಕಮ್ಮ ಅವರ ಶವ ಮನೆಯ ಆವರಣದಲ್ಲಿಯೇ ಪತ್ತೆಯಾಗಿದೆ. ಮಂಗಳವಾರ ಮಧ್ಯರಾತ್ರಿ ಹೊತ್ತಿಗೆ ಕೊಲೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
ಮೃತದೇಹದ ಸುತ್ತಲೂ ಕುಂಕುಮ ಚೆಲ್ಲಲಾಗಿದ್ದು, ಮನೆಯ ಒಳಗೆ ಹಾಗೂ ಹೊರಗೆ ಚುನಾವಣಾ ಕರಪತ್ರಗಳನ್ನು ಇಟ್ಟು ಅವುಗಳ ಮೇಲೆ ಹುಲ್ಲು, ಕುಂಕುಮ ಇಡಲಾಗಿದೆ. ವಾಮಾಚಾರಕ್ಕಾಗಿ ನಡೆದ ಕೊಲೆಯೋ ಅಥವಾ ಇನ್ಯಾವುದೋ ಕಾರಣಕ್ಕೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಸ್ಥಳಕ್ಕೆ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ ಮಬನೂರ ಭೇಟಿ ನೀಡಿದ್ದಾರೆ.