ಔರಾದ್: ಗ್ರಾಪಂ ವ್ಯಾಪ್ತಿಯಲ್ಲಿ ಹಲವಾರು ಯೋಜನೆಗಳಿದ್ದು, ಸ್ಥಳೀಯರು ಯೋಜನೆ ಕುರಿತು ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಡಿಒ ಶಿವಾನಂದ ಔರಾದೆ ಹೇಳಿದರು.
ತಾಲೂಕಿನ ಧೂಪತಮಹಾಗಾಂವ್ ಗ್ರಾಮದ ಧೂಪತ್ ಗುಗ್ಗವೆ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ನರೇಗಾ ಯೋಜನೆಯಡಿ ಕೆಲಸ ತೆಗೆದುಕೊಂಡು ಗ್ರಾಮದ ಸಮಗ್ರ ಅಭಿವೃದ್ಧಿ ಮಾಡಿಕೊಳ್ಳಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಜನರು ಮೊದಲು ತಿಳಿದುಕೊಳ್ಳಬೇಕು. ಉದ್ಯೋಗ ಖಾತ್ರಿಯಲ್ಲಿ ಗಂಡು, ಹೆಣ್ಣು ಎಂಬ ತಾರತಮ್ಯವಿಲ್ಲದೆ ಸಮಾನ ಕೂಲಿ ನೀಡಲಾಗುತ್ತಿದೆ ಎಂದರು.
ಇಲ್ಲಿ ಸ್ವಸಹಾಯ ಸಂಘದ ಶೆಡ್, ಕೆರೆ ಉದ್ಯಾನವನ, ವಾಕಿಂಗ್ ಟ್ರ್ಯಾಕ್, ಗ್ರಾಮೀಣ ಸಂತೆ ಕಾಮಗಾರಿ ಶಂಕುಸ್ಥಾಪನೆ ನಡೆಯಿತು. ಶ್ರೀ ವೀರಶೆಟ್ಟಿ ಮುತ್ತ್ಯಾ, ಶ್ರೀಧರ ಮುತ್ತ್ಯಾ, ಶರಣಪ್ಪ ಮುತ್ತ್ಯಾ, ಶ್ರೀನಿವಾಸ ಜೊನ್ನಿಕೆರೆ, ವಿನೋದ ಪವಾರ, ಜ್ಞಾನೇಶ್ವರ, ಬಸವರಾಜ ಮಡಿವಾಳ, ರಮೇಶ, ಬಸವರಾಜ ಬಾಬಳಿ, ಅಭಿಮಾನ, ಸಿದ್ರಾಮೇಶ್ವರ, ಶಿವಪ್ಪ ಮೂಲಗೆ, ಪಾಂಡುರಂಗ ಇಟಗಂಪಳ್ಳಿ, ಶಿವಕುಮಾರ ಪಾಟೀಲ್, ಬಾಲಾಜಿ ಠಾಕೂರ್, ನೆಹರು ಬಿರಾದಾರ, ವೆಂಕಾರೆಡ್ಡಿ ಇತರರಿದ್ದರು.