ಅಕ್ಕತಂಗೇರಹಾಳ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದಜೆಗೇರಿಸುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟಿಸಿದರು. ಗೌಡಪ್ಪ ಹೊಳೆಯಾಚಿ, ಶಂಕರ ಬೆನ್ನಿ, ಸಂತೋಷ ಈರಪ್ಪಗೋಳ, ರವಿ ಕಡಕಲ್​ ಇತರರಿದ್ದರು. 
ಜಿಲ್ಲೆ

ಗ್ರಾಪಂ ಮೇಲ್ದರ್ಜೆಗೇರಿಸದಂತೆ ಪ್ರತಿಭಟನೆ

ಅಂಕಲಗಿ: ನಮಗೆ ಪಟ್ಟಣ ಪಂಚಾಯಿತಿ ಬೇಡವೇ ಬೇಡ. ಗ್ರಾಮ ಪಂಚಾಯಿತಿಯೇ ಇರಲಿ ಎಂದು ಅಕ್ಕತಂಗೇರಹಾಳ ಗ್ರಾಮಸ್ಥರು ಸುವರ್ಣ ಸೌಧದಲ್ಲಿ ಶುಕ್ರವಾರ ಪ್ರತಿಭಟಿಸಿದರು. ಸುವರ್ಣ ಸೌಧ ಪ್ರಾಂಗಣದಲ್ಲಿ ಸೇರಿದ ಗ್ರಾಮಸ್ಥರು, ಅಂಕಲಗಿ ಹಾಗೂ ಅಕ್ಕತಂಗೇರಹಾಳ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದಜೆಗೇರಿಸಲಾಗಿದೆ. ಇದರಿಂದ ಗ್ರಾಮೀಣ ಸೌಲಭ್ಯ ಇಲ್ಲದೆ ಮಕ್ಕಳಿಗೆ ಅನ್ಯಾಯವಾಗುತ್ತದೆ. ಹಾಗಾಗಿ, ನಮಗೆ ನ್ಯಾಯ ಬೇಕು. ಸರ್ಕಾರ ಗ್ರಾಮವನ್ನು ಪಟ್ಟಣವನ್ನಾಗಿಸಿ ನಮಗೆ ಅನ್ಯಾಯ ಮಾಡಿದೆ. ನಮ್ಮ ಮಕ್ಕಳಿಗೆ ಸಿಗುವ ಗ್ರಾಮೀಣ ಸೌಲಭ್ಯ ಸೇರಿದಂತೆ ದುಬಾರಿ ಮನೆ ಕರ, ಭೂ ಕರಗಳ ಹೊರೆ ಹೇರಿದ್ದು ಸಹಿಸಲಾಗದು. ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ. ಸರ್ಕಾರ ತಣ ಪಟ್ಟಣ ಪಂಚಾಯತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಗ್ರಾಪಂ ಆಗಿ ಮುಂದುವರಿಸದಿದ್ದರೆ ಮುಂಬರುವ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು. ಗೌಡಪ್ಪ ಹೊಳೆಯಾಚಿ, ಶಂಕರ ಬೆನ್ನಿ, ಸಂತೋಷ ಈರಪ್ಪಗೋಳ, ರವಿ ಕಡಕಲ್​ ಇತರರಿದ್ದರು.