ಜಿಲ್ಲೆ

ಗ್ರಾಪಂ ಕರವಸೂಲಿಗಾರನ ವಿರುದ್ಧ ಕ್ರಮ ವಹಿಸಿ

ಹಗರಿಬೊಮ್ಮಹನಹಳ್ಳಿ: ಗ್ರಾಪಂ ಆಡಳಿತ ಹಾಗೂ ಅಧಿಕಾರಿಗಳಿಗೆ ಸುಳ್ಳು ದಾಖಲೆ ನೀಡಿ ಕೆಲಸಕ್ಕೆ ಸೇರಿರುವ ಮಾಲವಿ ಗ್ರಾಪಂ ಕರವಸೂಲಿಗಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಪಂ ಇಒ ಡಾ.ಪರಮೇಶ್ವರಪ್ಪಗೆ ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

ಗ್ರಾಮ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮಾತನಾಡಿ, ಮಾಲವಿ ಗ್ರಾಪಂ ಕರ ವಸೂಲಿಗಾರ ಕೆ.ರತ್ನನಾಯ್ಕ ವಿರುದ್ಧ ತಾಪಂ ಇಒಗೆ ದೂರು ನೀಡಿದ ಬಳಿಕ ನರೇಗಾ ಯೋಜನಾಧಿಕಾರಿ ಮೂಲಕ ಈ ದೂರಿನ ತನಿಖೆ ನಡೆಸಲಾಗಿದ್ದು, ಕರವಸೂಲಿಗಾರ ಗ್ರಾಪಂಗೆ ನೀಡಿರುವ ದಾಖಲೆಗಳು ಸುಳ್ಳು ಎಂದು ಕಂಡುಬಂದಿದೆ. ಮುಂದಿನ ಕ್ರಮಕ್ಕಾಗಿ ಗ್ರಾಪಂ ಆಡಳಿತದ ವಿವೇಚನೆಗೆ ಬಿಡಲಾಗಿದೆ ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆ. ಆದರೆ, ಗ್ರಾಪಂ ಸಾಮಾನ್ಯ ಸಭೆ ಮುಂದೂಡುತ್ತಾ ಬರುತ್ತಿದೆ. ಫೆ.20 ರೊಳಗೆ ಸಾಮಾನ್ಯ ಅಥವಾ ತುರ್ತು ಸಭೆ ಕರೆಯಬೇಕು. ಇಲ್ಲದಿದ್ದರೆ ಗ್ರಾಪಂ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.