ಸವಣೂರ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ವಿುಕರಿಗೆ ನೀಡುವ ಹಣದಲ್ಲಿ ಕಡಿತ ಮಾಡಿದ್ದನ್ನು ವಿರೋಧಿಸಿ ತಾಲೂಕಿನ ಬರದೂರ ಗ್ರಾಮದ ಕಾರ್ವಿುಕರು ಕುರಬರಮಲ್ಲೂರ ಗ್ರಾಪಂ ಕಚೇರಿಗೆ ಬುಧವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಹಳ್ಳದ ಹೂಳೆತ್ತುವ ಕಾರ್ಯ ಕೈಗೊಂಡ 63 ಕೂಲಿ ಕಾರ್ವಿುಕರಿಗೆ ಖಾತ್ರಿ ಯೋಜನೆಯಡಿ ಘೊಷಿಸಿರುವ 275 ರೂ. ಬದಲಾಗಿ 142 ರೂ.ಗಳನ್ನು ಮಾತ್ರ ಖಾತೆಗೆ ಜಮಾ ಮಾಡಲಾಗಿದೆ. ಇದರಲ್ಲಿ ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ, ತಾಪಂ ಅಧಿಕಾರಿಗಳು ನ್ಯಾಯ ಕೊಡಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ತಾ.ಪಂ. ಇಒ ಮುನಿಯಪ್ಪ ಪಿ., ಎಡಿ ಎಸ್.ಎಚ್.ಅಮರಾಪೂರ ಅಹವಾಲು ಸ್ವೀಕರಿಸಿ, ‘ಕೂಲಿ ವಿಷಯದಲ್ಲಿ ಆಗಿರುವ ಗೊಂದಲ ಸರಿ ಪಡಿಸಲಾಗುವುದು’ ಎಂದು ಸಮಜಾಯಿಶಿ ನೀಡಿದರು. ಆದರೆ, ಇದಕ್ಕೊಪ್ಪದ ಗ್ರಾಮಸ್ಥರು, ಕೆಲಸ ಮಾಡಿದ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ನಮಗೆ 275 ರೂ. ಕೂಲಿಯನ್ನು ನೀಡಲೇಬೇಕು ಎಂದು ಪಟ್ಟು ಹಿಡಿದರು. ನಂತರ ಅಧಿಕಾರಿಗಳ ತಂಡ ಕೂಲಿ ಕಾರ್ವಿುಕರ ಮುಖಂಡರೊಂದಿಗೆ ಹೂಳೆತ್ತಿದ ಸ್ಥಳಕ್ಕೆ ಭೇಟಿ ನೀಡಿ, ಮರು ಅಳತೆ ಕೈಗೊಂಡು ಕಾರ್ಯ ನಿರ್ವಹಿಸಿದ ಕೂಲಿ ಕಾರ್ವಿುಕರ ಹೆಸರನ್ನು ಪರಿಶೀಲಿಸಿದರು. ‘ಗ್ರಾಪಂ ಸಿಬ್ಬಂದಿ ಕಾರ್ಯುದಿಂದ ಗೊಂದಲ ಉಂಟಾಗಿದೆ. ಮಾನವ ದಿನಗಳ ಆದಾರದಲ್ಲಿ ಈಗ ನೀಡಿರುವ ಕೂಲಿ ಪಡೆದುಕೊಳ್ಳಬೇಕು. ಉಳಿದ ಕೂಲಿಯನ್ನು ನಿಮ್ಮ ಖಾತೆಗೆ ಸೇರ್ಪಡೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಇದಕ್ಕೊಪ್ಪಿದ ಕೂಲಿಕಾರರು ಪ್ರತಿಭಟನೆ ಹಿಂಪಡೆದರು. ಪಿಡಿಒ ಅನ್ನಪೂರ್ಣ ಶಿಂಪಿ, ಕೂಲಿ ಕಾರ್ವಿುಕರು, ಗ್ರಾಮದ ಪ್ರಮುಖರು ಹಾಗೂ ಇತರರು ಇದ್ದರು.
ಗ್ರಾಪಂ ಅಧ್ಯಕ್ಷೆ ಹಾಗೂ ಸದಸ್ಯರ ಕುಟುಂಬಸ್ಥರು ಜಾಬ್ ಕಾರ್ಡ್ ಪಡೆದಿರುವುದು ಹಾಗೂ ಅವರಿಗೆ ಬೇಕಾದವರು ಕೂಲಿ ಕೆಲಸಕ್ಕೆ ಬರದಿದ್ದರೂ ಸಹ ಅವರ ಖಾತೆಗೆ ಹಣ ವರ್ಗಾವಣೆ ಮಾಡಿರುವ ಕಾರಣ ಗೊಂದಲ ಉಂಟಾಗಿದೆ. ಎಲ್ಲ ಗ್ರಾಪಂಗಳಲ್ಲಿ ಜಾಬ್ ಕಾರ್ಡ್ ಉಚಿತವಾಗಿ ಮಾಡಿಕೊಟ್ಟರೆ, ಕುರಬರಮಲ್ಲೂರ ಗ್ರಾಮ ಪಂಚಾಯಿತಿಯಲ್ಲಿ ಪ್ರತಿ ಜಾಬ್ ಕಾರ್ಡ್ಗೆ 150 ರೂ. ಪಡೆಯಲಾಗುತ್ತಿದೆ.| ಕಿರಣ ಗುಂಡೂರಮಠ ಕೂಲಿ ಕಾರ್ವಿುಕಬರದೂರ ಗ್ರಾಮದಲ್ಲಿ ಹಳ್ಳದ ಹೂಳೆತ್ತುವ ಕಾರ್ಯ ಕೈಗೊಂಡ ಕೂಲಿ ಕಾರ್ವಿುಕರಿಗೆ ಸರ್ಕಾರದ ಆದೇಶದ ಮೇರೆಗೆ ಹಣ ನೀಡುವ ವ್ಯವಸ್ಥೆ ಕೈಗೊಳ್ಳಲಾಗುವುದು. ಜಾಬ್ ಕಾರ್ಡ್ಗಾಗಿ ಹಣ ಪಡೆದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.| ಮುನಿಯಪ್ಪ ಪಿ. ತಾ.ಪಂ ಇಒ