ಆನೇಕಲ್: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಎಲ್ಲ ಗ್ರಾಪಂಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪಣತೊಟ್ಟಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಮರಸೂರು ಗ್ರಾಪಂ ವ್ಯಾಪ್ತಿಯಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು. ಕೇಂದ್ರದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವದಡಿ ಜನಪರ ಕಾರ್ಯಕ್ರಮ ರೂಪಿಸಿ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲಾಗುತ್ತಿದೆ ಎಂದರು.
ಲಂಚಕ್ಕಾಗಿ ಆಸೆ ಪಡುವ ರಾಜಕಾರಣಿಗಳಿಂದ ರಾಜಕೀಯ ಕಲುಷಿತವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಬದಲಾಗಲಿದೆ.
ಮರಸೂರು ಗ್ರಾಪಂನಲ್ಲಿ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಹಾಗೂ ಹಲವು ವಿನೂತನ ಕಾರ್ಯಕ್ರಮ ರೂಪಿಸಿರುವುದು ಎಲ್ಲರಿಗೂ ಮಾದರಿ ಎಂದರು.
ಮರಸೂರು ಗ್ರಾಪಂ ಅಧ್ಯಕ್ಷೆ ಸರಿತಾ ವೆಂಕಟಸ್ವಾಮಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಐದು ಲಕ್ಷ ಗಿಡ ನೆಡಲು ಚಿಂತನೆ ನಡೆಸಲಾಗಿದೆ. ಎಲ್ಲ ಸದಸ್ಯರ ಸಹಕಾರ ಪಡೆದು ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದರು.
ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಎಂ.ಯಂಗಾರೆಡ್ಡಿ, ತಹಸೀಲ್ದಾರ್ ಪಿ.ದಿನೇಶ್, ತಾಪಂ ಇಒ ಲಕ್ಷ್ಮೀನಾರಾಯಣಸ್ವಾಮಿ, ಗ್ರಾಪಂ ಉಪಾಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಎಸ್‌ಟಿಆರ್‌ಆರ್ ಅಧ್ಯಕ್ಷ ಸಿ.ಮುನಿರಾಜು, ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಯಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ಬಿ.ಬಿ.ಐ.ಮುನಿರೆಡ್ಡಿ, ಮುಖಂಡರಾದ ಜಗದೀಶ್‌ರೆಡ್ಡಿ, ಮುನಿರತ್ನ ನಾರಾಯಣ್, ರಾಮಕೃಷ್ಣಾರೆಡ್ಡಿ, ಗ್ರಾಪಂ ಸದಸ್ಯರಾದ ಬಂಡಾಪುರ ರಮೇಶ್‌ರೆಡ್ಡಿ, ಪ್ರಭಾಕರರೆಡ್ಡಿ, ರಶ್ಮಿ ಅನಿಲ್, ಯಲ್ಲಪ್ಪ, ಪಿ.ಮಂಜುನಾಥ್, ನಾಗರತ್ನ, ಮಣಿಕಂಠ, ಮಂಜುಳ ಸೋಮಶೇಖರ್, ವಿ.ನಾಗರಾಜು, ಮಂಜುಳಾ ನಾರಾಯಣರೆಡ್ಡಿ, ವನಿತಾ, ಮುನಿಯಮ್ಮ, ಚಂದ್ರಕಲಾ, ಪಿಡಿಒ ಮುರಳಿ ಇದ್ದರು.