ಜಿಲ್ಲೆ

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮುಹೂರ್ತ

ಹೊಸದುರ್ಗ: ತಾಲೂಕಿನ 33 ಗ್ರಾಮ ಪಂಚಾಯಿತಿಗಳ 2ನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಆ.9, 10 ಮತ್ತು 11 ರಂದು ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್ ಪಟ್ಟರಾಜಗೌಡ ತಿಳಿಸಿದರು.
ಚುನಾವಣೆ ಅಂಗವಾಗಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ನಿಯೋಜಿತ ಚುನಾವಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ 33 ಗ್ರಾಪಂಗಳ 2ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗ್ರಾಪಂ ಸದಸ್ಯರ ಸಭೆ ನಡೆಸಿ ಮೀಸಲಾತಿ ನಿಗದಿಪಡಿಸಲಾಗಿದೆ. ಅದರಂತೆ ಎಲ್ಲ ಗ್ರಾಪಂ ಕಚೇರಿಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪ್ರತಿ ಮೂರು ಗ್ರಾಪಂಗಳಿಗೆ ಒಬ್ಬರಂತೆ 11 ಜನ ತಾಲೂಕು ಮಟ್ಟದ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳಾಗಿ ನೇಮಿಸಲಾಗಿದೆ. ನಿಗದಿಪಡಿಸಿದ ದಿನ ಚುನಾವಣೆ ನಡೆಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಬಿಇಒ ಸೈಯದ್ ಮೋಸಿನ್, ಬಿಸಿಎಂ ವಿಸ್ತರಣಾಧಿಕಾರಿ ಶಶಿಧರ್, ಕೃಷಿ ಎಡಿ ಸಿ.ಎಸ್.ಈಶಾ ಇತರರಿದ್ದರು.
ಯಾವ್ಯಾವ ಪಂಚಾಯತಿ?
ಆ.9-ಬೋಕಿಕೆರೆ, ಕಂಚೀಪುರ, ಆನಿವಾಳ, ದೊಡ್ಡಕಿಟ್ಟದಹಳ್ಳಿ, ಕಂಗ್ಗುವಳ್ಳಿ, ಬಲ್ಲಾಳಸಮುದ್ರ, ಲಕ್ಕೀಹಳ್ಳಿ, ಆತ್ತಿಮಗೆ, ಹುಣವಿನಡು, ದೊಡ್ಡಘಟ್ಟ ಹಾಗೂ ಮತ್ತೋಡು ಗ್ರಾಪಂಗಳು. ಆ.10-ಬೆಲಗೂರು, ಹೆಬ್ಬಳ್ಳಿ, ಮಧುರೆ, ಜಾನಕಲ್ಲು, ಚಿಕ್ಕಬ್ಯಾಲದಕೆರೆ, ಕಬ್ಬಳ, ಮಲ್ಲಪ್ಪನಹಳ್ಳಿ, ಕೈನಡು, ಕೆಲ್ಲೋಡು, ದೇವಪುರ, ಕಾರೇಹಳ್ಳಿ, ಆ.11-ಸಾಣೇಹಳ್ಳಿ, ತಂಡಗ, ದೇವಿಗೆರೆ, ಮಾಡದಕೆರೆ, ಎಸ್.ನೆರಲಕೆರೆ, ಹೆಗ್ಗೆರೆ, ಬಾಗೂರು, ಕುರುಬರಹಳ್ಳಿ, ಶ್ರೀರಾಂಪುರ, ಗುಡ್ಡದನೇರಲಕೆರೆ, ದೊಡ್ಡತೇಕಲವಟ್ಟಿ ಗ್ರಾಪಂ ಚುನಾವಣೆ ನಡೆಯಲಿದೆ.

(ಹೆಚ್‌ಎಸ್‌ಡಿ ಜಿಪಿ 28)
ಹೊಸದುರ್ಗ ತಾಲೂಕು ಕಚೇರಿಯಲ್ಲಿ ಶುಕ್ರವಾರ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಆಂಗವಾಗಿ ನಿಯೋಜಿತ ಚುನಾವಣಾಧಿಕಾರಿಗಳ ಸಭೆ ನಡೆಯಿತು. ಬಿಇಒ ಸೈಯದ್ ಮೋಸಿನ್, ತಹಸೀಲ್ದಾರ್ ಪಟ್ಟರಾಜಗೌಡ, ಕೃಷಿ ಎಡಿ ಸಿ.ಎಸ್.ಈಶ ಇತರರಿದ್ದರು.