ಕುಂದಾಣ: ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅನಿಲ್‌ಕುಮಾರ್ ಅರೋಳಿಕರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬುಧವಾರ 28 ಗ್ರಾನೈಟ್ ್ಯಾಕ್ಟರಿಗಳ ಮೇಲೆ ದಾಳಿ ನಡೆಸಿದೆ.
ಜಿಲ್ಲಾಡಳಿತದ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ದಾಳಿ ವೇಳೆ ್ಯಾಕ್ಟರಿಗಳಿಗೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ಕುಂದಾಣ ಹೋಬಳಿಯಾದ್ಯಂತ ಅಕ್ರಮವಾಗಿ ಕಲ್ಲು ದಿಮ್ಮಿಗಳನ್ನು ಕಟಿಂಗ್ ಮಾಡಿ ಪಾಲಿಷ್ ಮಾಡಲಾಗುತ್ತಿತ್ತು. 80ಕ್ಕೂ ಹೆಚ್ಚು ಫ್ಯಾಕ್ಟರಿಗಳು ಇಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದವು. ಗ್ರಾಮ ಪಂಚಾಯಿತಿ ಅಥವಾ ಸಂಬಂಧಪಟ್ಟ ಯಾವುದೇ ಇಲಾಖೆಯಿಂದ ಪರವಾನಗಿ ಪಡೆಯದೆಯೇ ಕಾರ್ಯ ನಿರ್ವಹಿಸಲಾಗುತ್ತಿತ್ತು. ಆದರೂ ಬೆಸ್ಕಾಂ ಅಧಿಕಾರಿಗಳು ಈ ಘಟಕಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿದ್ದರು ಎನ್ನಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಏ.6ರಂದು ನಡೆದಿದ್ದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ. ಮಂಜುನಾಥ್ ಈ ವಿಷಯ ಪ್ರಸ್ತಾಪಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಪಂ ಸಿಇಒ ರವಿಕುಮಾರ್, ತಕ್ಷಣವೇ ಅವನ್ನು ತೆರವುಗೊಳಿಸುವಂತೆ ದೇವನಹಳ್ಳಿ ತಹಸೀಲ್ದಾರ್ ಅವರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಕೆರೆಗೆ ತ್ಯಾಜ್ಯ ನೀರು: ಅಕ್ರಮವಾಗಿ ನಡೆಸುತ್ತಿದ್ದ ಗ್ರಾನೈಟ್ ್ಯಾಕ್ಟರಿಗಳ ಮಾಲೀಕರು ಕಲ್ಲಿನಪುಡಿ ಮಿಶ್ರಿತ ವಿಷಕಾರಿ ತ್ಯಾಜ್ಯ ನೀರನ್ನು ಕೆರೆ, ಕುಂಟೆಗಳಿಗೆ ನೇರವಾಗಿ ಹರಿಸುತ್ತಿದ್ದರು. ಆ ನೀರನ್ನು ಕುಡಿಯುತ್ತಿದ್ದ ಜಾನುವಾರುಗಳು ಮಾರಕ ರೋಗಗಳಿಗೆ ತುತ್ತಾಗಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದವು. ಜಲಚರಗಳು ಕೂಡ ಸಾಮೂಹಿಕವಾಗಿ ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ್ಯಾಕ್ಟರಿಗಳನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ದಾಳಿಯ ಸುಳಿವು ಸಿಗುತ್ತಲೇ ಬಂದ್: ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಕಾರಹಳ್ಳಿ ಕಡೆಯಿಂದ ಕೊಯಿರಾ, ಕುಂದಾಣದ ದೇವಗಾನಹಳ್ಳಿಗಳಲ್ಲಿ ನಡೆಯುತ್ತಿದ್ದ ಗ್ರಾನೈಟ್ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಲು ಮುಂದಾಗಲಿದ್ದಾರೆ ಎಂಬ ಸುಳಿವು ಪಡೆದ ಗ್ರಾನೈಟ್ ್ಯಾಕ್ಟರಿ ಮಾಲೀಕರು ಕಾರ್ಖಾನೆಗಳನ್ನು ಬಂದ್ ಮಾಡಿ ಕೆಲಸಗಾರರನ್ನು ಬೇರೆಡೆಗೆ ಸಾಗಹಾಕಿದ್ದರು ಹೀಗಾಗಿ ದಾಳಿಯ ವೇಳೆ ್ಯಾಕ್ಟರಿ ಬಳಿ ಯಾರೊಬ್ಬರೂ ಇರಲಿಲ್ಲ ಎನ್ನಲಾಗಿದೆ.
ಈ ಭಾಗದಲ್ಲಿ ಈಗಾಗಲೇ ಅಂತರ್ಜಲ ಸಂಪೂರ್ಣ ಹಾಳಾಗಿದೆ, ಇತ್ತೀಚಿನ ದಿನಗಳಲ್ಲಿ ಕೊರೆದ ಸುಮಾರು 13 ಕೊಳವೆಬಾವಿಗಳು ವಿಲವಾಗಿವೆ, ಇಲ್ಲಿನ ಕಲ್ಲಿನಪುಡಿ ಮಿಶ್ರಿತ ವಿಷಕಾರಿ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಲೇ ಮಾಡುತ್ತಿಲ್ಲ. ಈ ಬಗ್ಗೆ ಅಗತ್ಯಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಲಾಗಿತ್ತು. ಕೆ.ಸಿ.ಮಂಜುನಾಥ್, ಜಿಪಂ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ