ಅರಕಲಗೂಡು: ತಾಲೂಕಿನ ಕೊಣನೂರು ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕಡೇ ದಿನವಾದ ಶುಕ್ರವಾರ 82 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಚುನಾವಣಾ ಕಣ ರಂಗೇರುತ್ತಿದೆ.
13 ವಾರ್ಡ್‌ಗಳ 21 ಸದಸ್ಯ ಸ್ಥಾನಗಳಿಗೆ 127 ಮಂದಿ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ಎರಡು ನಾಮತ್ರಗಳು ತಿರಸ್ಕೃತಗೊಂಡಿದ್ದವು. ಇನ್ನುಳಿದ 125 ನಾಮಪತ್ರಗಳ ಪೈಕಿ 43 ಮಂದಿ ಆಕಾಂಕ್ಷಿಗಳು ನಾಮಪತ್ರ ವಾಪಾಸ್ಸು ಪಡೆದಿದ್ದು ಅಂತಿಮವಾಗಿ 82 ಅಭ್ಯರ್ಥಿಗಳು ಕಣದಲ್ಲುಳಿದು ಸ್ಪರ್ಧಾಳುಗಳಾಗಿದ್ದಾರೆ.
ಕಣದಲ್ಲಿ ಉಳಿದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವ ಚಿಹ್ನೆ ಗುರುತು ಪಡೆಯಲು ಕಚೇರಿ ಆವರಣದಲ್ಲಿ ಅಪಾರ ಮಂದಿ ಜಮಾಯಿಸಿದ್ದು ಆಕಾಂಕ್ಷಿಗಳಲ್ಲಿ ಕುತೂಹಲ ಮೂಡಿಸಿತು.