ಜಿಲ್ಲೆ

ಗ್ರಂಥಾಲಯಗಳ ಪಾತ್ರ ಅಲ್ಲಗಳೆಯುವಂತಿಲ್ಲ

ರಾಮದುರ್ಗ: ಪ್ರಚಲಿತ ಎಐ ತಂತ್ರಜ್ಞಾನ ಬಳಸಿ ಗ್ರಂಥಾಲಯದಲ್ಲಿ ಪರಿಣಾಮಕಾರಿ ಕ್ರಾಂತಿ ಮಾಡುವುದರ ಜತೆಗೆ ಗ್ರಂಥಾಲಯಲದಲ್ಲಿ ಸಿಗುವ ಮೌಲ್ಯಯುತ ಜ್ಞಾನದ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು ಎಂದು ಡಾ.ಜಿ.ಬಿ. ಮುರಗೋಡ ಹೇಳಿದರು.

ಪಟ್ಟಣದ ಸಿಎಸ್​ಬಿ ಕಲಾ, ಶಾ.ಎಂ.ಆರ್​.ಪಿ. ವಿಜ್ಞಾನ ಹಾಗೂ ಜಿ.ಎಲ್​.ಆರ್​ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 132ನೆಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಂಥಾಲಯಗಳು ಜಗತ್ತಿನ ಮಾಹಿತಿ ಕಣಜ. ಆಧುನಿಕ ತಂತ್ರಜ್ಞಾನದಿಂದ ಣಾರ್ಧದಲ್ಲಿ ಎಲ್ಲ ಮಾಹಿತಿ ಪಡೆಯಬಹುದಾಗಿದೆ ಎಂದರು.

ಪ್ರಭಾರಿ ಪ್ರಾಚಾರ್ಯ ಡಾ.ಎಚ್​.ಪಿ ಹಾಲೊಳ್ಳಿ, ಗ್ರಂಥಪಾಲಕ ಶಿವರಾಜ ಹಲ್ಯಾಳ ಮಾತನಾಡಿದರು. ಕಾಲೇಜಿನ ಉಪನ್ಯಾಸಕ ವಂದ,
ವಿದ್ಯಾರ್ಥಿಗಳು ಹಾಗೂ ಇತರರಿದ್ದರು. ವಿಜಯಕುಮಾರ ಮುಗಟೆ ಸ್ವಾಗತಿಸಿದರು. ಎಸ್​.ಎಂ.ಬಡಕಪ್ಪನವರ ನಿರೂಪಿಸಿದರು.