ಜಿಲ್ಲೆ

ಗ್ರಂಥಾಲಯಕ್ಕೆ ಬಂದು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು: ರುದ್ರೇಶ್

ಆಲೂರು : ಪ್ರತಿಯೊಬ್ಬರೂ ಪ್ರತಿದಿನ ಗ್ರಂಥಾಲಯಕ್ಕೆ ಬಂದು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಲೋಕದ ಜ್ಞಾನ ತಿಳಿಯುವುದಲ್ಲದೆ ಓದುವ ಅಭ್ಯಾಸ ರೂಢಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರೇಶ್ ಹೇಳಿದರು. ತಿಳಿಸಿದರು.

ಪಟ್ಟಣದಲ್ಲಿರುವ ಶಾಖಾ ಗ್ರಂಥಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯಕ್ಕೆ ಬರುವ ಮಹಿಳೆ ಮಕ್ಕಳ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ವಿದ್ಯುನ್ಮಾನಗಳಲ್ಲಿ ಪ್ರಸಾರವಾಗುವ ಮೋಜಿನ ಕಾರ್ಯಕ್ರಮಗಳತ್ತ ಎಲ್ಲರ ಒಲವು ಹೆಚ್ಚಿದೆ ಎಂದು ವಿಶಾಧಿಸಿದ ಅವರು ಗ್ರಂಥಾಲಯಗಳಿಗೆ ಹೋಗುವುದೆಂದರೆ ಪ್ರಭಾತದಿಂದ ಪರ್ವತಕ್ಕೆ ಏರಿದಂತೆ ಟಿವಿ ಮುಂದೆ ಕುಳಿತರೆ ಜ್ಞಾನ ವೃದ್ಧಿಸುವುದಿಲ್ಲ ಗ್ರಂಥಾಲಯಗಳಿಗೆ ಹೋಗಿ ಪುಸ್ತಕಗಳನ್ನ ಓದುವ ಹವ್ಯಾಸ ಬೆಳೆಸಿಕೊಳ್ಳಿ ಜ್ಞಾನ ರೂಪಿಸಿಕೊಳ್ಳಿ ಎಂದ ಅವರು.ಆಲೂರು  ಗ್ರಂಥಾ­­ಲಯ ಬಳಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಕೆಲಸ ಆಗಾಗ್ಗೆ ನಡೆ­ಯಬೇಕು.

ಕಾರ್ಯಕ್ರಮದಲ್ಲಿ ಕನ್ನಡ ಪ್ರಾದ್ಯಾಪಕ ಡಿ.ಕೆ.ಮಂಜಯ್ಯ ಮಾತನಾಡಿ ನಮ್ಮ ಜೀವನಶೈಲಿ ರೂಪಿಸುವಲ್ಲಿ ಗ್ರಂಥಾಲಯವು ಪ್ರಮುಖ ಪಾತ್ರ ವಹಿಸುತ್ತದೆ. ತಲೆ ತಗ್ಗಿಸಿ ಪುಸ್ತಕವನ್ನು ಓದಿದರೆ ಅದು ನಮ್ಮನ್ನು ಜೀವನ ಪೂರ್ತಿ ತಲೆತಗ್ಗಿಸದಂತೆ ನೋಡಿಕೊಳ್ಳುತ್ತದೆ ಪುಸ್ತಕದ ಮೇಲಿನ ಪ್ರೀತಿ ನಮ್ಮನ್ನು ಸದೃಢರನ್ನಾಗಿಸುತ್ತದೆ ದೇಶ ಸುತ್ತು ಅಥವಾ ಕೋಶ ಓದು ಎಂಬ ಮಾತಿದೆ.ನಾಗ­ರಿಕತೆ ಮತ್ತು ಜ್ಞಾನದ ಬೆಳವಣಿಗೆಯಲ್ಲಿ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿ­ಸುತ್ತಾ ಬಂದಿವೆ ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆ ಆಗಿದೆ.ದಿನಪತ್ರಿಕೆಗಳನ್ನೂ ಓದುತ್ತಿಲ್ಲ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಬಳಸುವವರು ವಿರಳವಾಗಿದ್ದಾರೆ ವಿದ್ಯಾರ್ಥಿಗಳು ಓದಿನ ಜೊತೆಗೆ ಸಂಪ್ರದಾಯ,ಸಂಸ್ಕೃತಿಗಳನ್ನು ಅರಿಯಬೇಕು ಗ್ರಂಥಾಲಯಕ್ಕೆ ಓದುಗರ ಸಂಖ್ಯೆ ಹೆಚ್ಚಾಗಲಿ ಎಂದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಟರಾಜ್ ನಾಕಲಗೋಡು ಮಾತನಾಡಿ, ಓದು ಮನುಷ್ಯನನ್ನು ಮಾನವನನ್ನಾಗಿಸುತ್ತದೆ ಓದುವ ಹವ್ಯಾಸ ಮೂಡಿಸುವಲ್ಲಿ ಗ್ರಂಥಾಲಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.ವಿಶ್ವದ ಮಹಾನ ವ್ಯಕ್ತಿಗಳ ಜೀವನವನ್ನು ನಾವು ಗಮನಿಸಿದಾಗ,ಅವರೆಲ್ಲರೂ ಬಾಲ್ಯದಿಂದಲೇ ಶ್ರೇಷ್ಠ ಗ್ರಂಥಗಳನ್ನು ಅಧ್ಯಾಯನ ಮಾಡಿದ್ದು ಕಂಡು ಬರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯಗಳಿಗೆ ಆಗಮಿಸಿ ಪುಸ್ತಕ ಹಾಗೂ ದಿನಪತ್ರಿಕೆ ಓದುವ ಮೂಲಕ ಗ್ರಂಥಾಲಯಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್,ಗ್ರಂಥಾಲಯ ಸಹಾಯಕ ಟಿ.ಕೆ.ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಗೋಪಾಲಕೃಷ್ಣ, ಮಾಜಿ ಅಧ್ಯಕ್ಷ ಗುಲಾಮ್ ಸತ್ತಾರ್,  ರಾಧಮ್ಮ ಜನಸ್ಪಂದನ ಸಂಸ್ಥೆ ಸಂಸ್ಥಾಪಕ ಹೇಮಂತ್ ಕುಮಾರ್,ನಿವೃತ್ತ ಕ್ಷೇತ್ರ ಶಿಕ್ಷಣಾದಿಕಾರಿ ವಿಜಯಕಾಂತ್, ಚರ್ಚ್ ಫಾದರ್ ಬಸವರಾಜ್,  ಶಿಕ್ಷಕರಾದ ವೆಂಕಟ ರಂಗಯ್ಯ, ದ್ಯಾವಪ್ಪ, ತಿಮ್ಮಯ್ಯ  ಉಪಸ್ಥಿತರಿದ್ದರು.